ಬೆಂಗಳೂರು: ಆರ್ ಎಸ್ ಎಸ್ ಕಚೇರಿಯಲ್ಲಿ 50 ವರ್ಷಗಳಿಂದ ತ್ರಿವರ್ಣ ಧ್ವಜ ಹಾರಿಸಿಲ್ಲ. ಆರ್ ಎಸ್ ಎಸ್ ಚಾತುರ್ವರ್ಣ, ಶ್ರೇಣಿಕೃತ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡವರ ಸಂಘಟನೆ. ಶ್ರೇಣಿಕೃತ ವ್ಯವಸ್ಥೆಯಿಂದ ಅಸಮಾನತೆ ಮುಂದುವರೆಯುತ್ತೆ, ಅಸಮಾನತೆ ಗುಲಾಮಗಿರಿಗೆ ಕಾರಣವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕ್ವಿಟ್ ಇಂಡಿಯಾ ದಿನಾಚರಣೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಹರ್ ಘರ್ ತಿರಂಗಾ ಎನ್ನುವುದು ಒಂದು ನಾಟಕ. ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರಗೀತೆಯನ್ನು ವಿರೋಧಿಸುವವರಿಗೆ ದೇಶಭಕ್ತಿ ಹೇಗೆ ಬರಲು ಸಾಧ್ಯ? ಈಗ ಹೊಸ ನಾಟಕ ಶುರುಮಾಡಿದ್ದಾರೆ ಅಷ್ಟೇ. ಇದನ್ನು ಕಾಂಗ್ರೆಸ್ ಹೊರಗೆಳೆಯಬೇಕಿದೆ ಎಂದು ಹೇಳಿದರು.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕಾಂಗ್ರೆಸ್ ದೇಶಾದ್ಯಂತ ಪಾದಯಾತ್ರೆ ಹಮ್ಮಿಕೊಂಡಿದೆ. ಆ.15ರಂದು ಕಾಂಗ್ರೆಸ್ ಪಾದಯಾತ್ರೆ ಆಯೋಜಿಸಿದೆ. ಇದರಲ್ಲಿ ಕನಿಷ್ಠ 1 ಲಕ್ಷ ಜನರು ಭಾಗವಹಿಸಬೇಕು. ಪಾದಯಾತ್ರೆಗೆ ಅಗತ್ಯ ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.