ಬೆಂಗಳೂರು: ಈಗಾಗಲೇ ಅಧಿಕಾರಿಗಳ ವರ್ಗಾವಣೆಗೆ ರೇಟ್ ಫಿಕ್ಸ್ ಆಗಿದೆ. ಈ ಸರ್ಕಾರದ ವಿರುದ್ಧವೂ ಪೇಸಿಎಂ ಪ್ರಾರಂಭ ಮಾಡಬೇಕಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ವರ್ಗಾವಣೆಗೆ ರೇಟ್ ಫಿಕ್ಸ್ ಆಗಿದೆ ಎಂದು ಅಧಿಕಾರಿಗಳೇ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರದ ವಿರುದ್ಧ ಇವರು ಪೇಸಿಎಂ ಅಂದ್ರಲ್ಲಾ ಈಗ ಕಾಂಗ್ರೆಸ್ ನವರು ಏನು ಮಾಡ್ತಿದ್ದಾರೆ ? ಇದನ್ನು ಪ್ರೂವ್ ಮಾಡಿ ಎಂದರೆ ಹೇಗೆ ಮಾಡುವುದು ? ಮೊದಲು ಸರ್ಕಾರ ಪರ್ಸಂಟೇಜ್ ವಿಚಾರ ಸ್ಪಷ್ಟ ಮಾಡಲಿ ಎಂದು ಹೇಳಿದರು.
ಇದೇ ವೇಳೆ ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ಷರತ್ತು ಹಾಕಿರುವ ವಿಚಾರವಾಗಿ ಕಿಡಿ ಕಾರಿದ ಹೆಚ್.ಡಿ.ಕೆ. ಹೋಟೆಲ್ ಗಳಲ್ಲಿ ದೋಸೆ ಫ್ರೀ ಅಂತ ಬೋರ್ಡ್ ಹಾಕಿ ಚಟ್ನಿ ಫ್ರೀ ಕೊಡದ ರೀತಿಯ ಕಥೆ ಆಗಿದೆ ಸರ್ಕಾರದ ಯೋಜನೆ ಎಂದು ಟೀಕಿಸಿದರು.