ಕರ್ನಾಟಕ ರಾಜ್ಯೋತ್ಸವಕ್ಕೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಂಪರ್ ಕೊಡುಗೆ ಒಂದನ್ನು ನೀಡಿದೆ. ಮೊಬೈಲ್ ಆಪ್ ಮೂಲಕವೇ ಇಂದಿನಿಂದ ಪ್ರಯಾಣಿಕರು ಟಿಕೆಟ್ ಖರೀದಿಸಬಹುದಾಗಿದೆ.
ಕ್ಯೂಆರ್ ಕೋಡ್ ಬಳಸಿ ಆಗಮನ ಮತ್ತು ನಿರ್ಗಮನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತಿದ್ದು, ನವೆಂಬರ್ ಒಂದರ ಇಂದಿನಿಂದಲೇ ಇದು ಜಾರಿಗೆ ಬರಲಿದೆ.
ಹೊಸ ಆಪ್ ಗ್ರಾಹಕ ಸ್ನೇಹಿಯಾಗಿದ್ದು, ಇದರಿಂದ ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆ ಮೊದಲಾದವು ಎದುರಾಗುವುದಿಲ್ಲ. ಅಲ್ಲದೆ ತಾವು ಯಾವ ಸ್ಟೇಷನ್ ಗೆ ಪ್ರಯಾಣಿಸಬೇಕೋ ಅಲ್ಲಿಗೆ ಆಪ್ ಮೂಲಕ ಟಿಕೆಟ್ ತೆಗೆದುಕೊಳ್ಳಬಹುದಾಗಿದೆ.