ಬೆಂಗಳೂರು: ರಾಜ್ಯಾದ್ಯಂತ 50 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದು, ಉದ್ಯಮಿಗಳಿಗೆ ಬೆವರಿಳಿಸಿದ್ದಾರೆ.
600ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಸರ್ಚ್ ವಾರಂಟ್ ಮೂಲಕ ರಾಜ್ಯದ ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದೆ. ತೆರಿಗೆ ಮರೆ ಮಾಚಿದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಗೋವಾ ಕರ್ನಾಟಕದ ಐಟಿ ಅಧಿಕಾರಿಗಳ ತಂಡ ಈ ದಾಳಿ ನಡೆಸಿದ್ದು, ಬೆಂಗಳೂರಿನ ಸದಾಶಿವನಗರದಲ್ಲಿರುವ ಎಂಬಸ್ಸಿ ಆರ್ಕೆಡ್ ಮೇಲೆ ದಾಳಿ ನಡೆಸಿದ್ದು, ನರಪತ್ ಸಿಂಗ್ ಚರೋಡಿ ಎಂಬುವವರ ಫ್ಲಾಟ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನರಪತ್ ಅವರ 607ರ ಫ್ಲಾಟ್ ಮೇಲೆ ದಾಳಿ ನಡೆಸಿರುವ ನಾಲ್ಕು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.