ನವದೆಹಲಿ: ನಿನ್ನೆಯಷ್ಟೇ ಲೋಕಸಭೆಯಲ್ಲಿ ನಾಲ್ವರು ಸಂಸದರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಇಂದು ರಾಜ್ಯಸಭೆಯ 19 ಸಂಸದರನ್ನು ಅಮಾನತುಗೊಳಿಸಿ ಡೆಪ್ಯುಟಿ ಸ್ಪೀಕರ್ ಆದೇಶ ಹೊರಡಿಸಿದ್ದಾರೆ.
ಜಿ ಎಸ್ ಟಿ ಹೆಚ್ಚಳ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿದ್ದ ಸಂಸದರು ನಿಯಮ 267ರ ಅಡಿ ಚರ್ಚೆಗೆ ಅವಕಾಶ ಕೊಡುವಂತೆ ಒತ್ತಾಯಿಸಿ ಸದನದಲ್ಲಿ ಪ್ರತಿಭಟನೆ ನಡೆಸಿದ್ದರು. ರಾಜ್ಯಸಭೆಯ ಬಾವಿಗಿಳಿದು ಕೇಂದ್ರ ಸರ್ಕಾರದ ವಿರಿದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಸದನದ ನಿಯಮಗಳ ವಿರುದ್ಧ ನಡೆದುಕೊಂಡ ಹಿನ್ನೆಲೆಯಲ್ಲಿ 19 ಸಂಸದರನ್ನು ಒಂದು ವಾರಗಳ ಕಾಲ ಸಂಸತ್ ಅಧಿವೇಶನದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ತೃಣಮೂಲ ಕಾಂಗ್ರೆಸ್ ಸಂಸದೆ ಸುಷ್ಮಿತಾ ದೇವ್, ಮೌಸಂ ನೂರ್, ದೋಲಾ ಸೇನ್, ಸಂತನು ಸೇನ್, ಅಭಿ ರಂಜನ್ ಬಿಸ್ವನ್, ನದಿಮ್ ಉಲ್ ಹಕ್, ಡಿಎಂಕೆಯ ಡಾ. ಕನಿಮೋಳಿ, ಎಂ. ಹಮಮೆದ್ ಅಬ್ದುಲ್ಲ, ಎಸ್. ಕಲ್ಯಾಣಸುಂದರಂ, ಆರ್. ಗಿರಿರಂಜನ್, ಎನ್ ಆರ್ ಎಲಂಗೊವಿ, ಎಂ. ಷಣ್ಮುಗಂ, ಟಿ ಆರ್ ಎಸ್ ನ ಬಿ. ಲಿಂಗಯ್ಯ ಯಾದವ್, ರವೀಂದ್ರ ವಾದಿರಾಜು, ದಾಮೋದರ್ ರಾವ್ ದಿವಕೊಂಡ, ಸಿಪಿಐ ಎಂ ನ ಎ.ಎ. ರಹೀಮ್, ಡಾ. ವಿ. ಸಿವದಸನ್ , ಸಂತೋಷ್ ಕುಮಾರ್ ಅಮಾನತುಗೊಂಡ ಸಂಸದರು.