ಬೆಂಗಳೂರು: ಸರ್ಕಾರದ ಸಾಧನೆಯ ಬಗ್ಗೆ ರಾಜ್ಯಪಾಲರ ಭಾಷಣದ ಮೂಲಕ ತೌಡು ಕುಟ್ಟಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಸಿದ ಸಿದ್ದರಾಮಯ್ಯ, ರಾಜ್ಯಪಾಲರ ಭಾಷಣದ ಮೂಲಕ ತೌಡು ಕುಟ್ಟಿಸಿದ್ದಾರೆ ಎಂದರು.
ಸಿದ್ದರಾಮಯ್ಯ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಮಾಧುಸ್ವಾಮಿ, ತೌಡು ಕುಟ್ಟಿದರೆ ತಪ್ಪೇನು ಆಯಿಲ್ ಬರುತ್ತೆ. ತೌಡಿನಿಂದ ಆಯಿಲ್ ಸಂಸ್ಕರಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಮಾಧುಸ್ವಾಮಿ ಹೇಳಿಕೆಗೆ ಪತಿಕ್ರಿಯಿಸಿದ ಸಿದ್ದರಾಮಯ್ಯ, ಒನಕೆಯಿಂದ ತೌಡು ಕುಟ್ಟಿದರೆ ಎಣ್ಣೆ ಬರುತ್ತೇನ್ರಿ ? ತೌಡು ಕುಟ್ಟೋದು ಅನ್ನೋದು ಒಂದು ನಾಣ್ನುಡಿ. ಒನಕೆಯಿಂದ ತೌಡು ಕುಟ್ಟಿದರೆ ಆಯಿಲ್ ಬರಲ್ಲ, ಬದಲಾಗಿ ಭತ್ತ ಕುಟ್ಟಿ ಎಂದು ತಿರುಗೇಟು ನೀಡಿದ್ದಾರೆ.