ಬೆಂಗಳೂರು: ಕಳೆದ 5 ತಿಂಗಳಿಂದ ಹಾಲಿನ ಪ್ರೋತ್ಸಾಹ ಧನ ನೀಡದ ರಾಜ್ಯ ಸರ್ಕಾರದ್ದು ಯಾವ ಸೀಮೆ ಗೋಪ್ರೇಮ? ಎಂದು ರಾಜ್ಯ ಕಾಂಗ್ರೆಸ್ ಘಟಕ ಕಿಡಿಕಾರಿದೆ.
ಹಾಲಿನ ಉತ್ಪಾದನೆ ಕುಂಠಿತವಾಗಿರುವುದಕ್ಕೂ ಪ್ರೋತ್ಸಾಹ ಧನ ನೀಡದಿರುವುದಕ್ಕೂ ನಂದಿನಿಯನ್ನು ಮುಳುಗಿಸಲು ಹುನ್ನಾರ ನಡೆಸಿರುವುದಕ್ಕೂ ಖಂಡಿತವಾಗಿಯೂ ಸಂಬಂಧವಿದೆ. ರಾಜ್ಯದ ಹೈನೋದ್ಯಮವನ್ನು ಮುಳುಗಿಸುವುದೇ ಬಿಜೆಪಿ ಗುರಿ ಎಂದು ವಾಗ್ದಾಳಿ ನಡೆಸಿದೆ.
ಆಡು ತಿನ್ನದ ಸೊಪ್ಪಿಲ್ಲ, ಬಿಜೆಪಿ ಭ್ರಷ್ಟಾಚಾರ ಮಾಡದ ಕ್ಷೇತ್ರವಿಲ್ಲ KMF ನೇಮಕಾತಿಯಲ್ಲೂ ಹುದ್ದೆಗಳ ಮಾರಾಟ ನಡೆದಿರುವುದು ಹೈಕೋರ್ಟ್ ನೇಮಕಾತಿಗೆ ತಡೆ ನೀಡಿರುವುದು ಬಿಜೆಪಿಯ ನಿರ್ಲಜ್ಜ ಭ್ರಷ್ಟಾಚಾರಕ್ಕೆ ಸಾಕ್ಷಿ.
KMF ನೇಮಕಾತಿಯನ್ನು ಗುಜರಾತ್ ನ ಏಜೆನ್ಸಿಗೆ ನೀಡಿದ್ದು ಯಾಕೆ? ಈ ಹಗರಣದ ಹಿಂದೆ ಅಮಿತ್ ಶಾ ಒತ್ತಡ ಕೆಲಸ ಮಾಡಿದೆಯೇ? ಎಂದು ಪ್ರಶ್ನಿಸಿದೆ.