ನವದೆಹಲಿ: ನೂತನ ಕೆಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶೋಭಾ ಕರಂದ್ಲಾಜೆಗೆ ಕೃಷಿ-ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಖಾತೆ ನೀಡಲಾಗಿದ್ದು, ಈ ಕುರಿತು ಸಂತಸ ವ್ಯಕ್ತಪಡಿಸಿರುವ ಅವರು, ನಾನು ಹಳ್ಳಿ ಹುಡುಗಿ, ಕೃಷಿ ಕುಟುಂಬದಿಂದ ಬಂದವಳು. ಕೃಷಿ ಖಾತೆ ಸಿಕ್ಕಿರುವುದು ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಪ್ರತಿ ರಾಜ್ಯದಲ್ಲೂ ಪ್ರವಾಸ ಮಾಡಿ ರೈತರ ಸಮಸ್ಯೆ ಆಲಿಸುತ್ತೇನೆ. ಕೃಷಿ ಕಾನೂನಿನ ಬಗ್ಗೆ ರೈತರಿಗೆ ಅರಿವು ಮೂಡಿಸುತ್ತೇನೆ ಎಂದರು.
ವೃದ್ಧ ತಂದೆಯನ್ನು ಥಳಿಸಿ, ಧರಧರನೆ ಎಳೆದು ತಂದು ಮನೆಯಿಂದ ಹೊರ ಹಾಕಿದ ಚಾಲಕ
ರಾಜ್ಯದ ರೈತರ ಸಮಸ್ಯೆಗಳತ್ತ ಗಮನಹರಿಸುತ್ತೇನೆ. ಕಾಫಿ, ಮೆಣಸು, ಅಡಿಕೆಗೆ ಉತ್ತಮ ಬೆಲೆ ಕೊಡಿಸಲು ಯತ್ನಿಸುತ್ತೇನೆ. ಈ ಬಗ್ಗೆ ಉಡುಪಿ-ಚಿಕ್ಕಮಗಳೂರು ಭಾಗದ ರೈತರಿಗೂ ಆಶ್ವಾಸನೆ ನೀಡುತ್ತೇನೆ ಎಂದು ಹೇಳಿದರು.