ಬೆಂಗಳೂರು: ಕಳೆದ ಏಪ್ರಿಲ್ ನಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಮತ್ತೆ ವಿದ್ಯುತ್ ದರ ಏರಿಸಿ ಕರೆಂಟ್ ಶಾಕ್ ನೀಡಿದೆ. ಅಕ್ಟೋಬರ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಲಾಗಿದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶ ಹೊರಡಿಸಿದೆ. ಯೂನಿಟ್ ಗೆ 24 ಪೈಸೆಯಿಂದ 43ಪೈಸೆವರೆಗೆ ದರ ಏರಿಕೆ ಮಾಡಲಾಗಿದೆ.
ಬೆಸ್ಕಾಂ ನಲ್ಲಿ ಯೂನಿಟ್ ಗೆ 43 ಪೈಸೆ, ಮೆಸ್ಕಾಂ ನಲ್ಲಿ ಯೂನಿಟ್ ಗೆ 24 ಪೈಸೆ, ಚೆಸ್ಕಾಂ ನಲ್ಲಿ ಪ್ರತಿ ಯೂನಿಟ್ ಗೆ 34 ಪೈಸೆ, ಹೆಸ್ಕಾಂ ನಲ್ಲಿ ಯೂನಿಟ್ ಗೆ 35 ಪೈಸೆ, ಜೆಸ್ಕಾಂ ನಲ್ಲಿಯೂ ಯೂನಿಟ್ ಗೆ 35 ಪೈಸೆಯಂತೆ ಹೆಚ್ಚಳ ಮಾಡಲಾಗಿದೆ.