ಬೆಂಗಳೂರು: ನಾವು ಬಾಯಿಗೆ ಬಟ್ಟೆ ಕಟ್ಟಿಕೊಂಡು ಕೂತಿದ್ದೇವೆ. ರಾಜ್ಯದಲ್ಲಿ ಯುಪಿ ಮಾಡೆಲ್ ಆಫ್ ಡೆವಲಪ್ಮೆಂಟ್ ಬರ್ತಿದೆ. ಸರ್ಕಾರದ ವಿರುದ್ಧ ಏನೂ ಮಾತನಾಡಬಾರದು. ಪ್ರಶ್ನೆ ಮಾಡಿದರೆ ರಾಜಕೀಯವಾಗಿ ಮುಗಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಪ್ರಶ್ನೆ ಮಾಡಿದರೆ ರಾಜಕೀಯವಾಗಿ ಮುಗಿಸುತ್ತೇವೆ ಎಂದು ಸಚಿವ ಅಶ್ವತ್ಥನಾರಾಯಣ ಮೂಲಕ ಮೆಸEಜ್ ಪಾಸ್ ಮಾಡಿದ್ದಾರೆ. 60-70 ಜನರ ಮೇಲೆ ಎಫ್ಐಆರ್ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
30 ಸಾವಿರ ನಾಗರಿಕರು ಸ್ಯಾಂಕಿ ಟ್ಯಾಂಕ್ ಬಳಿ ಫ್ಲೈ ಓವರ್ ಬೇಡ ಅಂತ ಪಿಟಿಷನ್ ಸಹಿ ಮಾಡಿದ್ದಾರೆ. ಸ್ಯಾಂಕಿ ಟ್ಯಾಂಕ್ ಬಳಿ ರಸ್ತೆ ಅಗಲೀಕರಣ ಮಾಡಬೇಡಿ ಅಂತ ಶಾಲಾ ಮಾಕ್ಕಳು ಬೊಮ್ಮಾಯಿ ಅಂಕಲ್ ಅಂತ ಪತ್ರ ಬರೆದಿದ್ದಾರೆ. ಮಕ್ಕಳ ಪತ್ರಕ್ಕೂ ಸಿಎಂ ಕಿವಿಗೊಟ್ಟಿಲ್ಲ. ಸ್ಯಾಂಕಿ ಟ್ಯಾಂಕ್ ಫ್ಲೈ ಓವರ್ ಬಗ್ಗೆ ಸಾರ್ವಜನಿಕರನ್ನು ಕರೆದು ಯಾಕೆ ಚರ್ಚೆ ನಡೆಸಿಲ್ಲ ಎಂದು ಪ್ರಶ್ನಿಸಿದರು.