ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೂಪಾಂತರಿ ವೈರಸ್ ಪ್ರಕರಣ ಹೆಚ್ಚುತ್ತಿದ್ದು, ಮತ್ತೆ ಐವರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಅಮೆರಿಕಾದಿಂದ ರಾಜ್ಯಕ್ಕೆ ಆಗಮಿಸಿದ 22 ವರ್ಷದ ಯುವತಿ, 24 ವರ್ಷದ ಯುವಕ, ದುಬೈನಿಂದ ಬಂದ 53 ವರ್ಷದ ವ್ಯಕ್ತಿ, ಘಾನಾದಿಂದ ಬಂದ 61 ವರ್ಷದ ವ್ಯಕ್ತಿ ಹಾಗೂ ಮುಂಬೈನಿಂದ ಬಂದ 41 ವರ್ಷದ ವ್ಯಕ್ತಿಯಲ್ಲಿ ಒಮಿಕ್ರಾನ್ ದೃಢಪಟ್ಟಿದೆ.
ಮಗಳು – ಅಳಿಯನ ನಿಶ್ಚಿತಾರ್ಥದ ಚಿತ್ರಗಳನ್ನು ಶೇರ್ ಮಾಡಿದ ಸ್ಮೃತಿ ಇರಾನಿ
ಡಿಸೆಂಬರ್ 22ರಂದು ಅಮೆರಿಕಾದಿಂದ ಬೆಂಗಳೂರಿಗೆ ಆಗಮಿಸಿದ್ದ ದಾವಣಗೆರೆ ಮೂಲದ ಯುವತಿಯಲ್ಲಿ ಒಮಿಕ್ರಾನ್ ಪತ್ತೆಯಾಗಿದ್ದು, ಸೋಂಕಿತ ಯುವತಿ ಎರಡು ಡೋಸ್ ಲಸಿಕೆ ಪಡೆದವರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಂಕಿತೆಗೆ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಒಮಿಕ್ರಾನ್ ಕೇಸ್ ಹೆಚ್ಚುತ್ತಿದ್ದು, ಸೋಂಕಿತರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ.