ಬೆಂಗಳೂರು: ಹಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್ ಬಸ್ ಗಳು ಓಡಾಡುತ್ತಿದ್ದವು. ನಂತರದ ದಿನಗಳಲ್ಲಿ ಅವುಗಳನ್ನು ನಿಲ್ಲಿಸಲಾಗಿತ್ತು. ಅನೇಕ ಬಾರಿ ಡಬಲ್ ಡೆಕ್ಕರ್ ಬಸ್ ಗಳನ್ನು ರಸ್ತೆಗಿಳಿಸಲಾಗುತ್ತದೆ ಎಂದು ಹೇಳಿತ್ತಾದರೂ ಅದು ಕಾರ್ಯಗತವಾಗಲು ತಡವಾಗಿತ್ತು. ಆದರೆ ಇದೀಗ ಈ ಬಸ್ ಗಳು ರಸ್ತೆಗಿಳಿಯೋದು ಕನ್ಫರ್ಮ್ ಆಗಿದೆ.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈ ವರ್ಷದ ಕೊನೆಯಲ್ಲಿ ಡಬಲ್ ಡೆಕ್ಕರ್ ಬಸ್ ಗಳು ರಸ್ತೆಗೆ ಇಳಿಯಲಿವೆ. ತುಮಕೂರು ಹಾಗೂ ಮೈಸೂರಿನಲ್ಲಿ ಡಬಲ್ ಡೆಕ್ಕರ್ ಇ ಬಸ್ ಗಳನ್ನು ಓಡಿಸಲು ಕೆ ಎಸ್ ಆರ್ ಟಿ ಸಿ ಚಿಂತನೆ ನಡೆಸಿದೆ.
ಎರಡೂ ನಗರಗಳಿಗೆ ಮೊದಲ ಹಂತದಲ್ಲಿ ತಲಾ 5 ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಳನ್ನು ಸಂಸ್ಥೆ ಓಡಿಸಲಿದೆ. ಇನ್ನು ಈ ಬಸ್ ಗಳು ಎಲೆಕ್ಟ್ರಿಕ್ ಬಸ್ ಗಳಾಗಿರುತ್ತವೆ. ಈ ಎರಡು ನಗರದಲ್ಲಿ ಪ್ರವಾಸೋದ್ಯಮ ಹಾಗೂ ವಿದ್ಯಾರ್ಥಿಗಳು ಹೆಚ್ಚಾಗಿ ಇರೋದ್ರಿಂದ ಮೊದಲು ಈ ಎರಡು ನಗರಗಳಿಗೆ ಬಸ್ ಹಾಕಲಾಗುತ್ತಿದೆ.
ಸದ್ಯ ಈ ಎರಡು ನಗರಗಳಿಗೆ ಮಾತ್ರ ಬಸ್ ಹಾಕಲಾಗ್ತಾ ಇದ್ದು, ಇಲ್ಲಿ ಯಶಸ್ವಿಯಾದರೆ ಹಲವು ನಗರಗಳಿಗೂ ವಿಸ್ತರಿಸಲಾಗುತ್ತದೆಯಂತೆ. ಇನ್ನು ಬೆಂಗಳೂರಿನಲ್ಲಿ ಮತ್ತೆ ಈ ಬಸ್ ಗಳು ಸಂಚಾರ ಮಾಡಲಿವೆಯಂತೆ. ಜುಲೈ ವೇಳೆಗೆ ಬಸ್ ರಸ್ತೆಗಿಳಿಯಬಹುದು ಎನ್ನಲಾಗಿದೆ. ಕಳೆದ ಜನವರಿ 2 ರಿಂದ ಐದು ಬಸ್‌ಗಳ ಖರೀದಿಗಾಗಿ ಬಿಎಂಟಿಸಿ ಟೆಂಡರ್ ಕರೆದಿದೆ. ಒಟ್ನಲ್ಲಿ ದಶಕಗಳ ಹಿಂದೆ ಇದ್ದ ಬಸ್ ಗಳು ಮತ್ತೆ ಈಗ ರಸ್ತೆಗಿಳಿಸಲು ತಯಾರಿ ನಡೆಸಿದೆ ಬಿಎಂಟಿಸಿ.