ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಿಡ್ನಿ ಮಾರಾಟ ಜಾಲ ಪತ್ತೆಯಾಗಿದ್ದು, ಪ್ರತಿಷ್ಠಿತ ಆಸ್ಪತ್ರೆಗಳ ಹೆಸರಲ್ಲಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಮೂವರು ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.
ನೈಜಿರಿಯಾದ ಮಿಮಿ ಅಲಿಯಾಸ್ ಮಿರಾಕಲ್, ಕೊವಾ ಕೊಲಿನ್ಸ್ ಹಾಗೂ ಘಾನಾದ ಮ್ಯಾಥ್ಯೂ ಇನೊಸೆಂಟ್ ಬಂಧಿತ ಆರೋಪಿಗಳು. ಆರೋಪಿಗಳು ಕಿಡ್ನಿ ಕೊಳ್ಳುವ ಹಾಗೂ ಮಾರಾಟ ಮಾಡುವವರನ್ನೆ ಟಾರ್ಗೆಟ್ ಮಾಡುತ್ತಿದ್ದರು.
‘ಕಾಂತಿಯುತ ಚರ್ಮ’ಕ್ಕೆ ಬಳಸಿ ಜೇನು
ಸಾಗರ್ ಆಸ್ಪತ್ರೆಯ ನಕಲಿ ವೆಬ್ ಸೈಟ್ ಸೃಷ್ಟಿಸಿದ್ದ ಆರೋಪಿಗಳು ಕಿಡ್ನಿ ಡೊನೇಶನ್ ಸಂಬಂಧ ಹಣ ಕೇಳುತ್ತಿದ್ದರು. ಈ ಬಗ್ಗೆ ಆಸ್ಪತ್ರೆ ಹೆಚ್ ಎಸ್ ಆರ‍್ ಲೇಔಟ್ ನ ಸಿಇಎನ್ ಠಾಣೆಗೆ ದೂರು ನೀಡಿತ್ತು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅಮೃತಹಳ್ಳಿಯ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಕಾವೇರಿ ಆಸ್ಪತ್ರೆ, ಬ್ಯಾಪ್ಟಿಸ್ಟ್ ಆಸ್ಪತ್ರೆ ಸೇರಿದಂತೆ ಹಲವು ಪ್ರಸಿದ್ಧ ಆಸ್ಪತ್ರೆಗಳ ನಕಲಿ ವೆಬ್ ಸೈಟ್ ಸೃಷ್ಟಿಸಿ ಒಂದು ಕಿಡ್ನಿಗೆ 4 ಕೋಟಿ ಕೊಡುವುದಾಗಿ ಆಫರ್ ನೀಡುತ್ತಿದ್ದರು. ವಾಟ್ಸಪ್ ಮೂಲಕ ರಿಜಿಸ್ಟರ್ ಫೀ ಸೇರಿದಂತೆ ವಿವಿಧ ಮಾದರಿ ಫೀಸ್ ಹೆಸರಲ್ಲಿ ಹಣ ವಸೂಲಿ ಮಾಡುತ್ತಿದ್ದರು. ಮೊಬೈಲ್ ಮೂಲಕವೇ ವ್ಯವಹಾರ ನಡೆಸುತ್ತಿದ್ದರು. ವಿಚಾರಣೆ ವೇಳೆ ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.