ಮಂಡ್ಯ: ಮಂಡ್ಯ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿ ನೇಮಕಾತಿ ವಿವಾದ ಒಂದು ವಾರ ಕಳೆದರೂ ಇನ್ನೂ ಬಗೆದಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ನೂತನ ಎಸ್ ಪಿ ಅಧಿಕಾರ ವಹಿಸಿಕೊಳ್ಳದಂತೆ ಪೊಲೀಸ್ ಇಲಾಖೆ ಡಿಪಿಎಆರ್ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇದೀಗ ನೇಮಕಾತಿ ವಿವಾದ ರಾಜ್ಯಪಾಲರ ಅಂಗಳ ತಲುಪಿದೆ.
ಮಂಡ್ಯ ಜಿಲ್ಲೆ ಎಸ್ ಪಿ ಯಾಗಿ ಅಕ್ಟೋಬರ್ 20ರಂದು ಸುಮನ್ ಡಿ ಪನ್ನೇಕರ್ ಅವರನ್ನು ನೇಮಕ ಮಾಡಲಾಗಿತ್ತು. ನಿರ್ಗಮಿತ ಎಸ್ ಪಿ ಡಾ.ಅಶ್ವಿನಿ ಎ ಎಸ್ ಪಿಗೆ ಚಾರ್ಜ್ ಕೊಟ್ಟು ತೆರಳಿದ್ದಾರೆ. ಆದರೆ ನೂತನ ಎಸ್ ಪಿ ಸುಮನ್ ಅಧಿಕಾರ ವಹಿಸಿಕೊಳ್ಳಲು ಪ್ರಭಾವಿಗಳು, ರಾಜಕೀಯ ಮುಖಂಡರು ತಡೆಯೊಡ್ಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
BREAKING: ಕಮರಿಗೆ ಉರುಳಿದ ಮಿನಿ ಬಸ್ – 8 ಮಂದಿ ಸಾವು
ಇದೀಗ ನೂತನ ಎಸ್ ಪಿಗೆ ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹೆಚ್.ಡಿ. ಜಯರಾಮ್ ಅವರಿಂದ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಕಳೆದ 7 ದಿನಗಳಿಂದ ಎಸ್ ಪಿ ಹುದ್ದೆ ಖಾಲಿಯಿದ್ದು, ನೂತನ ಎಸ್ ಪಿಗೆ ಅಧಿಕಾರ ವಹಿಸಿಕೊಳ್ಳಲು ತಡೆ ನೀಡಲಾಗುತ್ತಿದೆ ಎಂದು ದೂರಲಾಗಿದೆ.
ಅಕ್ರಮ ಗಣಿಗಾರಿಕೆ, ಹಲವು ಅವ್ಯಹಾರಗಳಿಗೆ ಕಡಿವಾಣ ಬೀಳುವ ಆತಂಕ ಹಿನ್ನೆಲೆಯಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿರುವ ಸುಮನ್ ನೇಮಕಕ್ಕೆ ಜಿಲ್ಲೆಯ ರಾಜಕಾರಣಿಗಳು, ಅಧಿಕಾರಿಗಳು ತಡೆಯೊಡ್ಡುತ್ತಿದ್ದಾರೆ ಎನ್ನಲಾಗಿದೆ.