ರಷ್ಯಾದ ಬೈಕೂನೂರ್ ಕಾಸ್ಮೋಡ್ರೋಮ್ನಲ್ಲಿ ರಾಕೆಟ್ನಲ್ಲಿದ್ದ ಜಪಾನ್ ಹಾಗೂ ಅಮೆರಿಕದ ಧ್ಚಜಗಳನ್ನು ಮುಚ್ಚಲಾಗಿದ್ದು ಈ ವಿಡಿಯೋವನ್ನು ರಷ್ಯಾದ ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥ ಡಿಮಿಟ್ರಿ ರೊಗಿಜನ್ ಶೇರ್ ಮಾಡಿದ್ದಾರೆ. ಆದರೆ ಅಲ್ಲಿನ ಸಿಬ್ಬಂದಿ ಭಾರತದ ತ್ರಿವರ್ಣ ಧ್ವಜವನ್ನು ಹಾಗೆಯೇ ಉಳಿಸಿದ್ದಾರೆ.
ರಾಕೆಟ್ನ ಮೇಲ್ಮೈನಿಂದ ಕೆಲವು ಧ್ವಜಗಳನ್ನು ತೆಗೆದು ಹಾಕುವುದರಿಂದ ಅದು ಇನ್ನಷ್ಟು ಸುಂದರವಾಗಿ ಕಾಣುತ್ತದೆ ಎಂದು ಡಿಮಿಟ್ರಿ ಹೇಳಿದ್ದಾರೆ.
ಟ್ವಿಟರ್ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿರುವ ಡಿಮಿಟ್ರಿ ರೊಗೊಜಿನ್, ಬೈಕೂನೂರ್ನಲ್ಲಿರುವ ಲಾಂಚರ್ಗಳು ಕೆಲವು ದೇಶಗಳ ಧ್ವಜಗಳಿಲ್ಲದೇ ನಮ್ಮ ರಾಕೆಟ್ ಹೆಚ್ಚು ಸುಂದರವಾಗಿ ಕಾಣುತ್ತದೆ ಎಂದು ನಿರ್ಧರಿಸಿದ್ದಾರೆ ಎಂದು ಶೀರ್ಷಿಕೆ ನೀಡಿದ್ದಾರೆ.
ಈ ವಾರದ ಆರಂಭದಲ್ಲಿ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ನಡುವೆ ವಾಷಿಂಗ್ಟನ್ ಸಹಕಾರವನ್ನು ನಿರ್ಬಂಧಿಸಿದರೆ ಅನಿಯಂತ್ರಿತ ಡಿಯೋರ್ಬಿಟ್‌ನಿಂದ ಬಾಹ್ಯಾಕಾಶ ನಿಲ್ದಾಣವನ್ನು ಯಾರು ಉಳಿಸುತ್ತಾರೆ ಎಂದು ಡಿಮಿಟ್ರಿ ರೊಗೊಜಿನ್ ಎಚ್ಚರಿಕೆ ನೀಡಿದ್ದರು.
https://twitter.com/i/status/1499043075586469900