ಬೆಳಗಾವಿ: ಎರಡು ದಿನಗಳ ಹಸುಗೂಸನ್ನು ಬ್ಯಾಗ್ ನಲ್ಲಿಟ್ಟು ರಸ್ತೆ ಪಕ್ಕದ ಗುಂಡಿಯಲ್ಲಿ ಬಿಟ್ಟುಹೋಗಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದ ಕೆ ಎಲ್ ಇ ಸ್ಕೂಲ್ ಬಳಿ ನಡೆದಿದೆ.
ಕೇವಲ 2 ದಿನದ ನವಜಾತ ಶಿಶುವನ್ನು ರಸ್ತೆ ಬಳಿಯ ಗುಂಡಿಗೆ ಬಿಸಾಕಿ ಹೋಗಿದ್ದಾರೆ. ಸ್ಥಳೀಯರು ಮಗುವನ್ನು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ಆರೋಗ್ಯದಿಂದ ಇದೆ.
ಸ್ಥಳಕ್ಕೆ ನಿಪ್ಪಾಣಿ ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವಿನ ಪೋಷಕರ ಪತ್ತೆಗಾಗಿ ಹುಡುಕಾಟ ನಡೆಸಲಾಗಿದೆ.