
ಹೌದು, ಸಾರ್ವಜನಿಕ ಪ್ರದೇಶದಲ್ಲಿ ಉಗುಳಿದ್ದಕ್ಕೆ ವ್ಯಕ್ತಿಯೊಬ್ಬರಿಗೆ 500 ರೂ. ದಂಡ ವಿಧಿಸಲಾಗಿದೆ. ಚಲನ್ ಪ್ರಕಾರ, ಡಿಜಿ ಮುಖ್ಯ ರಸ್ತೆಯ ಬಳಿ ಈ ಘಟನೆ ಸಂಭವಿಸಿದೆ. ಭಾರತದಲ್ಲಿ ಜನರು ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದು ಅಲ್ಲಲ್ಲಿ ಕಂಡುಬರುತ್ತದೆ. ಇದೀಗ ಬೆಂಗಳೂರಿನಲ್ಲಿ ಇದಕ್ಕೆ ದಂಡ ವಿಧಿಸಲಾಗಿದೆ. ಹೀಗೆಯೇ ಇತರ ನಗರಗಳಲ್ಲಿಯೂ ದಂಡವನ್ನು ವಿಧಿಸಬೇಕು ಎಂದು ರೆಡ್ಡಿಟ್ ಗಳು ಅಭಿಪ್ರಾಯಪಟ್ಟಿದ್ದಾರೆ.
ಮೇ 2020 ರಲ್ಲಿ, ಬಿಬಿಎಂಪಿ, ಬೆಂಗಳೂರು ನಾಗರಿಕ ಸಂಸ್ಥೆ ಸಾರ್ವಜನಿಕವಾಗಿ ಉಗುಳುವುದು, ಮೂತ್ರ ವಿಸರ್ಜನೆ, ಕಸ ಎಸೆಯುವುದು ಮತ್ತು ಮುಖಗವಸು ಧರಿಸದಿದ್ದಲ್ಲಿ ಮೊದಲ ಹಂತದಲ್ಲಿ 1,000 ರೂಪಾಯಿ ದಂಡ ವಿಧಿಸುವುದಾಗಿ ಘೋಷಿಸಿತ್ತು. ಪ್ರತಿ ಉಲ್ಲಂಘನೆಯ ಮೇಲೆ 2,000 ರೂ. ಹಣವನ್ನು ದಂಡ ವಿಧಿಸಲಾಗುತ್ತದೆ ಎಂದು ಹೇಳಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು, ದೆಹಲಿಯಲ್ಲಿ ಈ ರೀತಿಯ ಪ್ರಕರಣ ತೀರಾ ಅಗತ್ಯವಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು, ದಂಡದ ಮೊತ್ತವನ್ನು ಹೆಚ್ಚಿಸಬೇಕು ಮತ್ತು ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವವರ ಮೇಲೂ ಇಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.