ಉಕ್ರೇನ್: ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ಘೋಷಣೆಯಾಗಿದ್ದು, ರಾಷ್ಟ್ರದ ಭದ್ರತೆ, ಹಿತಾಸಕ್ತಿ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದಿರುವ ರಷ್ಯಾ ಈಗಾಗಲೇ ಪೂರ್ವ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ.
ಇದರ ಬೆನ್ನಲ್ಲೇ ಉಕ್ರೇನ್ ನಿಂದ ನಾಗರಿಕ ವಿಮಾನಯಾನ ಹಾರಾಟ ರದ್ದುಗೊಂಡಿದೆ. ಉಕ್ರೇನ್ ನಲ್ಲಿ ಮಿಲಿಟರಿ ವಿಮಾನ ಹಾರಾಟ ಆರಂಭವಾಗಿದ್ದು, ವಾಯುಪ್ರದೇಶದ ನಿಯಂತ್ರಣಕ್ಕೆ ರಷ್ಯಾ ಯತ್ನ ನಡೆಸಿದೆ. ರಷ್ಯಾ ವಾಯುಯಾನ ಅಧಿಕಾರಿಗಳು ವಶಕ್ಕೆ ಪಡೆಯುವ ಯತ್ನದಲ್ಲಿರುವ ಹಿನ್ನೆಲೆಯಲ್ಲಿ ಕೆಲ ವಾಯುಪ್ರದೇಶಗಳು ಅಪಾಯಕಾರಿ ಎಂದು ಉಕ್ರೇನ್ ಎಚ್ಚರಿಸಿದೆ.
BIG NEWS: ಯುದ್ಧ ಘೋಷಣೆ ಬೆನ್ನಲ್ಲೇ ಉಕ್ರೇನ್ ನ ಕೈವ್ ಹಾಗೂ ಖಾರ್ಕಿವ್ ಪ್ರದೇಶದಲ್ಲಿ ಭಾರಿ ಸ್ಫೋಟ
ಈ ನಡುವೆ ರಷ್ಯಾ ಹಾಗೂ ಉಕ್ರೇನ್ ಗಡಿ ವಿವಾದ ಬಹಳ ವರ್ಷಗಳಿಂದ ನಡೆಯುತ್ತಿದೆ. ಇತಿಹಾಸದುದ್ದಕ್ಕೂ ಉಕ್ರೇನ್ ಗ್ರೀಕ್, ರೋಮನ್ನರಿಂದ ಆಕ್ರಮಣಕ್ಕೆ ಒಳಗಾಗಿದೆ. ಈಗ ರಷ್ಯಾ ಯುದ್ಧ ಘೋಷಣೆ ಮಾಡಿರುವುದು ಅಪರಾಧ. ರಷ್ಯಾದ ಅಪ್ರಚೋದಿತ ದಾಳಿ ಸರಿಯಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಿಡಿಕಾರಿದ್ದಾರೆ.