ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಘೋಷಿಸಿದ ಯುದ್ಧ ಅನೇಕ ಅಮಾಯಕರ ಪ್ರಾಣವನ್ನೇ ಕಿತ್ತುಕೊಳ್ತಿದೆ. ಈ ಎಲ್ಲದರ ನಡುವೆ ನಾಳೆ ರಷ್ಯಾ ಹಾಗೂ ಉಕ್ರೇನ್ ನಡುವೆ ಎರಡನೇ ಹಂತದ ಮಾತುಕತೆ ನಡೆಯಲಿದೆ ಎನ್ನಲಾಗಿದ್ದು ಈ ಮಾತುಕತೆಯ ಮೂಲಕವಾದರೂ ಯುದ್ಧದ ಭೀಕರತೆ ಅಂತ್ಯವಾಗಬಹುದೇ..? ಎಂಬ ವಿಶ್ವಾಸ ಮೂಡಿದೆ.
ಸೋಮವಾರದಂದು ರಷ್ಯಾ ಹಾಗೂ ಉಕ್ರೇನ್ನ ನಡುವೆ ಮೊದಲ ಸುತ್ತಿನ ಮಾತುಕತೆ ನಡೆದಿದ್ದರೂ ಸಹ ಅದು ಯಾವುದೇ ಸ್ಪಷ್ಟ ಫಲಿತಾಂಶವನ್ನು ನೀಡಿರಲಿಲ್ಲ. ಹೀಗಾಗಿ ಉಭಯ ರಾಷ್ಟ್ರಗಳು ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಇದೇ ವಿಚಾರವಾಗಿ ಮಾತುಕತೆ ನಡೆಸುವುದಾಗಿ ಹೇಳಿತ್ತು. ಅದರಂತೆ ಉಭಯ ರಾಷ್ಟ್ರಗಳ ಮಾತುಕತೆಗೆ ಇದೀಗ ನಾಳೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ.