ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದ್ದು, ಶಂಕಿತ ಆರೋಪಿಗಳಾದ ನರೇಶ್ ಹಾಗೂ ಶ್ರವಣ್ ನಿರೀಕ್ಷಣಾ ಜಾಮೀನಿಗೆ ಪೊಲೀಸರು ಆಕ್ಷೇಪಣೆ ಸಲ್ಲಿಸಿದ್ದಾರೆ.
ಸೀಡಿ ಕೇಸ್ ಬಹಿರಂಗ ಬೆನ್ನಲ್ಲೇ ತಲೆ ಮರೆಸಿಕೊಂಡಿರುವ ಆರೋಪಿಗಳು ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದು, ಇದೀಗ ಎಸ್ ಐ ಟಿ ಅಧಿಕಾರಿಗಳು ಜಾಮೀನು ನೀಡದಂತೆ ಕೋರ್ಟ್ ಗೆ ಆಕ್ಷೆಪಣೆ ಸಲ್ಲಿಸಿದ್ದಾರೆ. ಆರೋಪಿಗಳು ನ್ಯಾಯ ಸಮ್ಮತ ತನಿಖೆಗೆ ಅಡ್ದಿ ಪಡಿಸುತ್ತಿದ್ದು, ಬ್ಲ್ಯಾಕ್ ಮೇಲ್ ಉದ್ದೇಶದಿಂದಲೇ ಈ ಘಟನೆಗಳು ನಡೆದಿದೆ ಎಂದು ತಿಳಿಸಿದ್ದಾರೆ.
ಯುವತಿ ಹಾಗೂ ಆರೋಪಿಗಳು ಬೆಂಗಳೂರಿನ ಎಂಪೈರ್ ಹೋಟೆಲ್ ನಲ್ಲಿ ಭೇಟಿಯಾಗಿದ್ದಾರೆ. ಅಲ್ಲದೇ ಯುವತಿ, ಆಕೆ ಸ್ನೇಹಿತ ಹಾಗೂ ಆರೋಪಿಗಳ ನಡುವಿನ ಮೊಬೈಲ್ ಕರೆಗಳ ಬಗ್ಗೆಯೂ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಅಲ್ಲದೇ ಮಾಜಿ ಸಚಿವರನ್ನು ಖೆಡ್ಡಾಗೆ ಕೆಡವಿ ಅವರಿಂದ ಹಣ ವಸೂಲಿ ಮಾಡಿದ್ದ ಸಿಡಿ ಗ್ಯಾಂಗ್, ಬ್ಲ್ಯಾಕ್ ಮೇಲ್ ಉದ್ದೇಶಕ್ಕಾಗಿಯೇ ಇಂತದ್ದೊಂದು ಸಂಚು ನಡೆಸಿತ್ತು ಎಂದು ಎಸ್ ಐ ಟಿ ಆಕ್ಷೇಪಣೆಯಲ್ಲಿ ತಿಳಿಸಿದೆ ಎನ್ನಲಾಗಿದೆ.