ಬೆಳಗಾವಿ- ಪಂಚಮಸಾಲಿಗೆ 2 ಎ ಮೀಸಲಾತಿ ಕುರಿತಂತೆ ಹಲವಾರು ದಿನಗಳಿಂದ ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಲೇ ಇದೆ. ಆದರೆ ಸರ್ಕಾರ ಇನ್ನೂ ಈ ಕುರಿತು ನಿರ್ಧಾರ ತೆಗೆದುಕೊಂಡಿಲ್ಲ. ಈ ಸಂಬಂಧ ಗೋಕಾಕ್ ಕ್ಷೇತ್ರದ 65 ಗ್ರಾಮಗಳಲ್ಲಿ ಪಂಚಮಸಾಲಿ ಸಮಾಜಕ್ಕೆ ಜಾಗೃತಿ ಮೂಡಿಸಲು ಶ್ರೀಗಳು ಹೊರಟಿದ್ದಾರೆ.
ಈ ಕುರಿತು ಗೋಕಾಕ್ ತಾಲೂಕಿನ ಖನಗಾಂವ-ನಬಾಪುರ ಗ್ರಾಮದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸ್ವಾಮೀಜಿ ಮಾತನಾಡಿದ್ದಾರೆ. ನೀವೆಲ್ಲರೂ ಹೋರಾಟಕ್ಕೆ ಬರಬೇಕು. ಅದಕ್ಕಾಗಿ ಜಾಗೃತಿ ಮೂಡಿಸುತ್ತಿದ್ದೇನೆ ಎಂದರು. ಇನ್ನು ರಮೇಶ್ ಜಾರಕಿಹೊಳಿ ಹೆಸರು ಹೇಳದೇ, ಗೋಕಾಕ್ ರಾಜಕಾರಣಿ ಏನು ಮಾಡೋತ್ತಾರೋ. ಯಾವಾಗ ಸರ್ಕಾರ ಕೆಡವುತ್ತಾರೋ, ಯಾವಾಗ ಸರ್ಕಾರ ತರುತ್ತಾರೋ ಎಂಬ ಬಗ್ಗೆ ಸದಾ ನ್ಯೂಸ್ ಚಾನಲ್ ನಲ್ಲಿ ಬ್ರೇಕಿಂಗ್ ನ್ಯೂಸ್ ಬರುತ್ತದೆ ಎಂದು ಆತಂಕ.
ಇನ್ನು ಇರುವ ಸರ್ಕಾರದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸಬೇಕಿದೆ. ನಾವು ಸರ್ಕಾರ ಕೆಡವೋದು ಇಲ್ಲ. ಹೊಸ ಸರ್ಕಾರ ರಚಿಸುವುದೂ ಇಲ್ಲ. ನಮ್ಮ ಸಮಾಜಕ್ಕೆ ಒಳಿತಾಗಬೇಕು ಎನ್ನುವ ಮೂಲಕ ರಮೇಶ್ ಜಾರಕಿಹೊಳಿಗೆ ಕುಟುಕಿದ್ರು.