ಬೆಂಗಳೂರು: ಸಾಮಾಜಿಕ ಜಾಲತಾಣ, ಯೂಟ್ಯೂಬ್ ಚಾನಲ್ ಗಳಲ್ಲಿ ತಮಗೆ ತೇಜೋವಧೆ ಮಾಡಲಾಗಿದೆ ಎಂದು ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ದೂರು ದಾಖಲಿಸಿದ್ದಾರೆ.
ಕೆಪಿಸಿಸಿ ಆನೇಕಲ್ ವಿಭಾಗದ ಸೋಷಿಯಲ್ ಮೀಡಿಯಾ ವಿಂಗ್ ಸೇರಿ 22 ಟ್ರೋಲ್ ಪೇಜ್ ಗಳು ಹಾಗೂ ಯೂಟ್ಯೂಬ್ ಚಾನಲ್ ಮೇಲೆ ಕೇಸ್ ದಾಖಲಿಸಿದ್ದಾರೆ.
ಭಕ್ತರೊಬ್ಬರ ತಲೆಯ ಮೇಲೆ ಕಾಲಿಡುವ ದೃಶ್ಯವನ್ನು ಪೋಸ್ಟ್ ಮಾಡಿ ಅದಕ್ಕೆ ಕೆಟ್ಟದಾಗಿ ಕಮೆಂಟ್ ಮಾಡುವ ಮೂಲಕ ತನ್ನ ತೇಜೋವಧೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸ್ವಾಮೀಜಿ ಕುಡಿದ ನಶೆಯಲ್ಲಿ ನಿಲ್ಲಲು ಆಗದೇ ತಾನು ದೇವರ ಅವತಾರವೆಂದು ಹೇಳಿಕೊಂಡು ಜನರ ಧಾರ್ಮಿಕ ಭಾವನೆ, ನಂಬಿಕೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಟ್ರೋಲ್ ಪೇಜ್ ಗಳಲ್ಲಿ ಸ್ವಾಮೀಜಿ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಲಾಗುತ್ತಿದೆ. ಇದರಿಂದ ಸ್ವಾಮೀಜಿಗಳ ಲಕ್ಷಾಂತರ ಭಕ್ತರ ಮನಸ್ಸಿಗೆ ಘಾಸಿಯಾಗುತ್ತಿದೆ. ಅಲ್ಲದೇ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಟ್ರೋಲಿಗರ ವಿರುದ್ಧ, ಟೇಜೋವಧೆ ಮಾಡುತ್ತಿರುವ ಯೂಟ್ಯೂಬ್ ಚಾನಲ್ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿನಯ್ ಗುರೂಜಿ ತಮ್ಮ ಪಿಎ ಮೂಲಕ ದೂರು ದಾಖಲಿಸಿದ್ದಾರೆ.