ಬೆಂಗಳೂರು: ಯುವತಿ ಮೇಲೆ ಅಮಾನುಷವಾಗಿ ಆಸಿಡ್ ದಾಳಿ ನಡೆಸಲಾಗಿದೆ. ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಚಿಕಿತ್ಸೆಯ ಎಲ್ಲಾ ಖರ್ಚು ವೆಚ್ಚವನ್ನು ಸರ್ಕಾರವೇ ನೋಡಿಕೊಳ್ಳಲಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಯುವತಿಗೆ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯೊಂದಿಗೆ ನಾನು ಮಾತನಾಡಿದ್ದೇನೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿದೆ. ಇಂದು ಅಥವಾ ನಾಳೆಯೊಳಗೆ ಆರೋಪಿ ಬಂಧಿಸಲಾಗುವುದು. ಸಂತ್ರಸ್ಥ ಯುವತಿ ಭವಿಷ್ಯ ರೂಪಿಸುವ ಸಲುವಾಗಿ ಸರ್ಕಾರಿ ಉದ್ಯೋಗ ನೀಡಬೇಕು. ಈ ನಿಟ್ಟಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು.
ಉದ್ಯೋಗಾಕಾಂಕ್ಷಿಗಳಿಗೆ ಬಂಪರ್; ಐಟಿ ಕಂಪನಿಗಳ 90 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನಡೆಯಲಿದೆ ನೇಮಕಾತಿ
ಆಸಿಡ್ ದಾಳಿಯಿಂದ ಯುವತಿಗೆ ಶೇ.35ರಷ್ಟು ಭಾಗ ಬರ್ನ್ ಆಗಿದೆ. ಸ್ಕಿನ್ ಬ್ಯಾಂಕ್ ನಿಂದ ಸ್ಕಿನ್ ತರಿಸಿ ಸರ್ಜರಿ ಮಾಡಬೇಕು. ಸುದೀರ್ಘವಾಗಿ ಚಿಕಿತ್ಸೆ ನಡೆಯಬೇಕಿದೆ. ಸರ್ಕಾರವೇ ಖರ್ಚು ವೆಚ್ಚ ನೋಡಿಕೊಳ್ಳಲಿದೆ. ವೈದ್ಯರು ಕೂಡ ಗುಣಮುಖವಾಗುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.