ಬೆಂಗಳೂರು: ಕೆಲಸದ ಆಮಿಷವೊಡ್ದಿ ಯುವತಿಯೊಬ್ಬಳನ್ನು ಪ್ರಿಯಕರನೇ ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆ ದಂಧೆಗೆ ನೋಕಿರುವ ಘಟನೆ ಬೆಂಗಳೂರಿನ ಶಿವಾನಂದ್ ಸರ್ಕಲ್ ನಲ್ಲಿ ನಡೆದಿದೆ.
ಮಂಡ್ಯ ಮೂಲದ ಯುವತಿಯನ್ನು ಆಕೆಯ ಪ್ರಿಯಕರ ಕೆಲಸ ಕೊಡಿಸುವುದಾಗಿ ಹೇಳಿ ಬೆಂಗಳೂರಿಗೆ ಕರೆತಂದು ತನ್ನ ಪರಿಚಿತ ಹುಡುಗರ ಸ್ನೇಹ ಮಾಡಿಸಿದ್ದಾನೆ. ಶಿವಾನಂದ್ ಸರ್ಕಲ್ ಬಳಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದಾಗ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ಬಳಿ ಸಂತ್ರಸ್ತ ಯುವತಿ ಹೇಳಿಕೆ ನೀಡಿದ್ದು, ಕೆಲಸ ಕೊಡಿಸುವುದಾಗಿ ಕರೆತಂದು ತನ್ನನ್ನು ಮಂಜುಳಾ ಎಂಬ ಮಹಿಳೆ ಸಂಪರ್ಕಕ್ಕೆ ಒಪ್ಪಿಸಿದ್ದಾರೆ. ಮಂಜುಳಾ ಯುವತಿಯರನ್ನು ಹೋಟೆಲ್ ಲಾಡ್ಜ್ ಗಳಿಗೆ ಕಳುಹಿಸಿ ದಂಧೆ ಮಾಡಿಸುತ್ತಿದ್ದಳು. ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಯುವತಿ ಕಣ್ಣೀರಿಟ್ಟಿದ್ದಾಳೆ. ಇದೀಗ ಪ್ರಕರಣ ಸಂಬಂಧ ಮಂಜುಳ, ಬ್ರಹ್ಮೇಂದ್ರ, ಶಿವಾನಂದ ಸರ್ಕಲ್ ಬಳಿಯ ಸಾಯಿ ಲಾಡ್ಜ್ ಮಾಲೀಕ ಸಂತೋಷ್ ನನ್ನು ಬಂಧಿಸಲಾಗಿದೆ.
ಯುವತಿ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಹೈಗ್ರೌಂಡ್ ಠಾಣೆ ಪೊಲೀಸರು, ದಂಧೆಯಲ್ಲಿ ಹಲವು ರೌಡಿಗಳು ಭಾಗಿಯಾಗಿರುವ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದಾರೆ. ಗ್ಯಾಂಗ್ ರೇಪ್ ನಡೆಸಿದ ಆರೋಪಿಗಳಿಗಾಗಿ ಹಾಗೂ ರೌಡಿ ಶೀಟರ್ ಗಳಿಗಾಗಿ ಹುಡುಕಾಟ ಆರಂಭವಾಗಿದೆ.