ಬೆಂಗಳೂರು: ಕೊರೊನಾ ಎರಡನೇ ಅಲೆಯಲ್ಲಿ ರೂಪಾಂತರ ವೈರಸ್ ಕಾಟ ದೇಶದ ಜನತೆಯನ್ನು ಬೆಂಬಿಡದೇ ಕಾಡುತ್ತಿದೆ. ಇದೀಗ ಡೆಲ್ಟಾ ವೈರಸ್ ಮೂಲಕ ಮೂರನೇ ಅಲೆ ಸದ್ದಿಲ್ಲದೇ ದೇಶದಲ್ಲಿ ಅಟ್ಟಹಾಸ ಆರಂಭಿಸಿದೆಯೇ ಎಂಬ ಅನುಮಾನ ಆರಂಭವಾಗಿದೆ. ಅದರಲ್ಲೂ ಡೆಲ್ಟಾ ಪ್ಲಸ್ ಪ್ರಬೇಧ ಯುವಕರನ್ನೇ ಹೆಚ್ಚು ಟಾರ್ಗೆಟ್ ಮಾಡುತ್ತಿದೆ ಎನ್ನಲಾಗಿದೆ.
ಕೋವಿಡ್ ಪರಿಹಾರ ಸಿಗದವರಿಗೆ ಸಿಎಂ ಯಡಿಯೂರಪ್ಪ ಗುಡ್ ನ್ಯೂಸ್
ಕೊರೊನಾ ಎರಡನೇ ಅಲೆಯಲ್ಲಿ ಸಾವನ್ನಪ್ಪಿದ 11 ಸಾವಿರ ಜನರ ಪೈಕಿ ಹೆಚ್ಚಿನವರು ಡೆಲ್ಟಾಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ರೋಗನಿರೋಧಕ ಶಕ್ತಿ ಹೆಚ್ಚಿದ್ದರೂ ಕೂಡ ಹೊಸ ಪ್ರಬೇಧಕ್ಕೆ 40 ವರ್ಷದೊಳಗಿನವರೇ ಬಲಿಯಾಗಿದ್ದಾರೆ ಎನ್ನಲಾಗಿದೆ. ದೇಶದಲ್ಲಿ 22 ಡೆಲ್ಟಾ ಪ್ರಕರಣ ಪತ್ತೆಯಾಗಿದ್ದು ಅದರಲ್ಲಿ ರಾಜ್ಯದಲ್ಲಿ ಇಬ್ಬರು ಡೆಲ್ಟಾ ಪ್ಲಸ್ ಮಾದರಿಯ ವೈರಸ್ ನಿಂದ ಬಳಲುತ್ತಿದ್ದಾರೆ ಎಂಬುದು ಆತಂಕವನ್ನು ಹೆಚ್ಚಿಸಿದೆ.
’ಮುಳುಗುತ್ತಿದ್ದ ಮಹಿಳೆ’ ರಕ್ಷಿಸಲು ಬಂದ ತುರ್ತು ತಂಡಕ್ಕೆ ಕಾದಿತ್ತು ಶಾಕ್….!
ಮೊದಲ ಅಲೆಯಲ್ಲಿ ಕೋವಿಡ್ ಪ್ರಬೇಧಕ್ಕೂ ಡೆಲ್ಟಾಗೂ ವ್ಯತ್ಯಾಸವಿತ್ತು. ಆದರೆ ಎರಡನೇ ಅಲೆಯಲ್ಲಿನ ರೂಪಾಂತರಗೊಂಡಿರುವ ಈ ಹೆಮ್ಮಾರಿ ಭಾರತದಲ್ಲಿಯೇ ಕಾಣಿಸಿಕೊಂಡಿದ್ದು, ಸಾವಿರಾರು ಜನ ಸಾವನ್ನಪ್ಪಿದ್ದಾರೆ. ಡೆಡ್ಲಿ ವೈರಸ್ ನಿಂದ ದೇಹದಲ್ಲಿ ಏಕಾಏಕಿ ಶುಗರ್ ಲೆವಲ್ ಹೆಚ್ಚುತ್ತದೆಯಲ್ಲದೇ ಶ್ವಾಸಕೋಶದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತಿದೆ. ಯುವಜನತೆಯೇ ಡೆಲ್ಟಾದಿಂದ ಹೆಚ್ಚು ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿದುಬಂದಿದೆ.