ಉಕ್ರೇನ್: ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧ ಘೋಷಣೆ ಮಾಡಿರುವ ಬೆನ್ನಲ್ಲೇ ಇದೀಗ ಉಕ್ರೇನ್ ನ ಹಲವು ಪ್ರದೇಶಗಳಲ್ಲಿ ಭಾರಿ ಸ್ಫೋಟಗಳು ಸಂಭವಿಸಿವೆ.
ಉಕ್ರೇನ್ ನ ಕೈವ್ ಹಾಗೂ ಖಾರ್ಕಿವ್ ಪ್ರದೇಶಗಳಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ರಷ್ಯಾ ಮಿಲಿಟರಿ ಕಾರ್ಯಾಚಾರಣೆ ಪ್ರಾರಂಭವಾಗಿದೆ ಎಂದು ವರದಿಗಳು ತಿಳಿಸಿವೆ.
ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ಪುಟಿನ್ ನಾಗರಿಕರನ್ನು ರಕ್ಷಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಉಕ್ರೇನ್ ಸೈನಿಕರು ಶಸ್ತ್ರಾಸ್ತ್ರ ಕೆಳಗಿಳಿಸಿ ಶರಣಾಗತರಾಗಿ. ಇಲ್ಲವಾದಲ್ಲಿ ಪೂರ್ವ ಭಾಗದಲ್ಲಿ ಮಿಲಿಟರಿ ಕಾರ್ಯಾಚರಣೆ ಅನಿವಾರ್ಯ. ಉಕ್ರೇನ್ ನಿಂದ ಬರುವ ಬೆದರಿಕೆಗಳಿಗೆ ಇದು ಪ್ರತಿಕ್ರಿಯೆಯಾಗಿದೆ. ಉಕ್ರೇನ್ ವಶಪಡಿಸಿಕೊಳ್ಳುವುದು ನಮ್ಮ ಉದ್ದೇಶವಲ್ಲ ಆದರೆ ರಕ್ತಪಾತ ಸಂಭವಿಸಿದರೆ ಅದರ ಜವಾಬ್ದಾರಿ ಉಕ್ರೇನ್ ಸರ್ಕಾರದ್ದು ಎಂದು ವಾಗ್ದಾಳಿ ನಡೆಸಿದ್ದಾರೆ.