ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರಕ್ಕೆ ಪತನದ ಭೀತಿ ಎದುರಾಗಿದ್ದರೂ ಸೋಲೊಪ್ಪಿಕೊಳ್ಳಲು ಸರ್ಕಾರ ಸಿದ್ಧವಾಗಿಲ್ಲ.
ಎನ್ ಸಿ ಪಿ ನಾಯಕ ಶರದ್ ಪವಾರ್ ಅವರೊಂದಿಗೆ ಸಭೆ ಬಳಿಕ ಮಾತನಾಡಿದ ಶಿವಸೇನೆ ನಾಯಕ ಸಂಜಯ್ ರಾವತ್, ಮಹಾ ವಿಕಾಸ್ ಅಘಾಡಿ ಸರ್ಕಾರ ಸುಭದ್ರವಾಗಿದೆ. ಯುದ್ಧ ನಡುಬೀದಿಯಲ್ಲಾಗಲಿ, ಸದನದಲ್ಲಾಗಲಿ ಎಲ್ಲಿಯೇ ಆದರೂ ನಮ್ಮ ಗೆಲುವು ನಿಶ್ಚಿತ. ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾವು ಎಲ್ಲವನ್ನೂ ಎದುರಿಸಲು ಸಿದ್ಧ. ಈವರೆಗೆ ಏಕನಾಥ್ ಶಿಂಧೆ ಬಣಕ್ಕೆ ಅವಕಾಶ ಕೊಟ್ಟಿದ್ದೆವು. ಆದರೆ ಅವರು ಅವಕಾಶ ಕಳೆದುಕೊಂಡಿದ್ದಾರೆ. ಈಗ ನಮ್ಮದೇ ಗೇಮ್ ಪ್ಲಾನ್ ರೂಪಿಸಿದ್ದು ಪೂರ್ಣ ಬಹುಮತವನ್ನು ಸಾಬೀತು ಪಡಿಸುತ್ತೇವೆ. ಈಗಾಗಲೇ ನಾವು ಏನು ಮಾಡಬೇಕೋ ಅದನ್ನು ಮಾಡಿದ್ದೇವೆ. ಕಾಂಗ್ರೆಸ್ ಹಾಗೂ ಎನ್ ಸಿ ಪಿ ನಾಯಕರು ನಮ್ಮ ಬೆಂಬಲಿಕ್ಕಿದ್ದಾರೆ ಎಂದು ತಿಳಿಸಿದ್ದಾರೆ.