ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಾನು ಮಾಡಿದ ಆರೋಪಗಳ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಐಪಿಎಸ್ ಅಧಿಕಾರಿ ಡಿ.ರೂಪಾ ಮತ್ತೆ ಕಿಡಿಕಾರಿದ್ದಾರೆ.
ರೋಹಿಣಿ ಸಿಂಧೂರಿ, ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಭೇಟಿಯಾಗಿ ಡಿ.ರೂಪಾ ವಿರುದ್ಧ ದೂರು ಸಲ್ಲಿಸಿದ ಬಳಿಕ ಮುಖ್ಯಕಾರ್ಯದರ್ಶಿ ಭೇಟಿಗೆ ವಿಧಾನಸೌಧಕ್ಕೆ ಆಗಮಿಸಿದ ಐಪಿಎಸ್ ಅಧಿಕಾರಿ ಡಿ.ರೂಪಾ, ಕೆಲ ದಾಖಲೆಗಳ ಸಮೇತ ಮುಖ್ಯಕಾರ್ಯದರ್ಶಿಯವರಿಗೆ ತನಿಖೆ ನಡೆಸಲು ತಿಳಿಸುತ್ತೇನೆ ಎಂದರು.
ರೋಹಿಣಿ ಸಿಂಧೂರಿ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಆರೋಪಗಳು ಸಾಬೀತಾಗಿದೆ. ಆದರೂ ಯಾವ ಶಕ್ತಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ತಡೆಯುತ್ತಿದೆ? ರೋಹಿಣಿ ಹಿಂದೆ ಹಲವು ಶಕ್ತಿಗಳಿವೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ರೋಹಿಣಿ ಸಿಂಧೂರಿ ಬೆಂಗಳೂರಿನ ಮನೆಗೆ ಇಟಾಲಿಯನ್ ಪೀಠೋಪಕರಣ, ಜರ್ಮನ್ ಪೀಠೋಪಕರಣಗಳ ಖರೀದಿ ಮಾಡಿದ್ದರೆ. ಮೈಸೂರಿನಲ್ಲಿ ಡಿಸಿ ಆಗಿದ್ದಾಗ ಪೀಠೋಪಕರಣಗಳನ್ನು ಕೊಂಡೊಯ್ದಿದ್ದರು. ಸರ್ವಿಸ್ ಕಂಡಕ್ಟ್ ರೂಲ್ಸ್ ಉಲ್ಲಂಘನೆ ಮಾಡಿ ಖಾಸಗಿ ಫೋಟೋಗಳನ್ನು ಕಳುಹಿಸಿದ್ದರು. ಈಗಾಗಲೇ ಹಲವು ಬಾರಿ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ರೋಹಿಣಿ ವಿರುದ್ಧ ಕ್ರಮ ಕೈಗೊಂಡಿಲ್ಲ. ಸಿಂಧೂರಿ ಅವರನ್ನು ರಕ್ಷಣೆ ಮಾಡುವ ಕೆಲಸ ಆಗುತ್ತಿದೆ. ಎಲ್ಲವನ್ನೂ ಲೋಕಾಯುಕ್ತ ತನಿಖೆಗೆ ಕೊಡಲಿ ಎಂದು ಹೇಳಿದರು.