ಕಾರವಾರ: ನಮ್ಮ ಪಕ್ಷದ ಸಿಎಂ ಬಗ್ಗೆ ನಿರ್ಧರಿಸಲು ಹೆಚ್.ಡಿ.ಕುಮಾರಸ್ವಾಮಿ ಯಾರು? ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರಶ್ನಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ಪ್ರಹ್ಲಾದ್ ಜೋಶಿಯವರನ್ನು ಸಿಎಂ ಮಾಡಲು ಆರ್ ಎಸ್ ಎಸ್ ಹುನ್ನಾರ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ದೇಶದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿಯಾಗಬಹುದು. 25 ವರ್ಷ ಆಗಿರಬೇಕು, ತಲೆ ಸರಿಯಿರಬೇಕು ಅಷ್ಟೇ ಎಂದರು.
ನಮ್ಮ ಪಕ್ಷದ ಬಗ್ಗೆ, ನಮ್ಮ ಪಕ್ಷದ ಸಿಎಂ ನಿರ್ಧಾರ ಮಾಡಲು ಹೆಚ್.ಡಿ.ಕೆ ಯಾರು? ಕುಮಾರಸ್ವಾಮಿ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ನಮ್ಮ ಪಕ್ಷದ ಬಗ್ಗೆ ಮಾತನಾಡಲು ಅವರಿಗೆ ಏನು ನೈತಿಕತೆಯಿದೆ ಎಂದು ಪ್ರಶ್ನಿಸಿದರು.
ಸಿಡಿ ವಿಚಾರವಗಿಯೂ ಅವರು ಮಾತನಾಡಿದ್ದಾರೆ. ಹೆಚ್.ಡಿ.ಕೆ ಬಗ್ಗೆ ಹೇಳಲು ಹೋದರೆ ಬೇಕಾದಷ್ಟು ಇದೆ. ತಾಜ್ ವೆಸ್ಟ್ ಎಂಡ್ ಹೋಟೆಲ್ ಯಾತ್ರೆ ನೋಡಿದರೆ ಬೇಕಾದಷ್ಟು ಆಗುತ್ತೆ. ಗಾಂಧೀಜಿ ತನ್ನ ಚಟ ಬಿಟ್ಟು ಬೇರೆಯವರಿಗೆ ಹೇಳಿದರಂತೆ, ಅದೇ ರೀತಿ ಮೊದಲು ಹೆಚ್ ಡಿ ಕೆ ಇವರ ಚಟ ಬಿಟ್ಟು ಬೇರೆಯವರಿಗೆ ಹೇಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.