ಮೈಸೂರು: ಬಿಜೆಪಿ ಸರ್ಕಾರ ಅಸಮರ್ಥ ಸರ್ಕಾರ ಸಮಸ್ಯೆಗೆ ಪರಿಹಾರ ನೀಡಲೂ ಸಾಧ್ಯವಾಗದಷ್ಟು ಅಸಮರ್ಥವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿಎಂ ಬೊಮ್ಮಾಯಿ ಯಾರನ್ನೋ ಮೆಚ್ಚಿಸಲು, ಆರ್ ಎಸ್ ಎಸ್ ಮುಖಂಡರಿಗೆ, ದೆಹಲಿ ನಾಯಕರಿಗೆ ತೋರಿಸಲು ಬರಿ ಬಾಯಿ ಮಾತಿನಲ್ಲಿ ಹೇಳಿಕೆ ಕೊಡುತ್ತಿದ್ದಾರೆ. ಇದನ್ನು ಬಿಟ್ಟು ಮೊದಲು ಜನರನ್ನು ಮೆಚ್ಚಿಸಲು ಅಧಿಕಾರ ಮಾಡಲಿ ಎಂದರು.
Masked ʼಆಧಾರ್ʼ ಎಷ್ಟು ಸುರಕ್ಷಿತ….? ಡೌನ್ ಲೋಡ್ ಹೇಗೆ….? ಇಲ್ಲಿದೆ ಮಾಹಿತಿ
ಹುಬ್ಬಳ್ಳಿ ಗಲಭೆ ವಿಚಾರವಾಗಿ ಗಲಭೆ ಮಾಡಿದವರ ಆಸ್ತಿ ಬುಲ್ಡೋಜ್ ಮಾಡಿದರೆ ಲಾಭವಿಲ್ಲ, ಸಂಪತ್ತು ಲೂಟಿ, ಬೆಂಕಿ ಹಚ್ಚುವವರ ವಿರುದ್ಧ ಕಾರ್ಯಾಚರಣೆ ಮಾಡಿ, ಗಲಭೆಕೋರರ ಆಸ್ತಿ ಮುಟ್ಟುಗೋಲು ಹಾಕಲಿ. ಸಿಎಂ ಬೊಮ್ಮಾಯಿ ಎಲ್ಲಾ ಧಾರ್ಮಿಕ ಮುಖಂಡರ ಸಭೆ ಕರೆದು ಚರ್ಚಿಸಿ ಸ್ಪಷ್ಟ ಸಂದೇಶವನ್ನು ರವಾನಿಸಲಿ ಎಂದು ಹೇಳಿದರು.
ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಕುಮಾರಸ್ವಾಮಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯನವರೇ ನೇರ ಕಾರಣ. ಮಾತೆತ್ತಿದರೆ ಶಾಸಕರನ್ನು ಸರಿಯಾಗಿ ನೋಡಿಕೊಂಡಿಲ್ಲ ಅಂತಾರೆ. ಸುಳ್ಳನ್ನೇ ಹೇಳಿಕೊಂಡು ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.