ರಾಜ್ಯದಲ್ಲಿ ಈಗ ಯಶಸ್ವಿನಿ ಯೋಜನೆ ಮತ್ತೆ ಜಾರಿಗೆ ಬಂದಿದ್ದು, ಈಗಾಗಲೇ ನೋಂದಾವಣೆ ಆರಂಭವಾಗಿದೆ. ಡಿಸೆಂಬರ್ 31 ನೋಂದಾಯಿಸಿಕೊಳ್ಳಲು ಅಂತಿಮ ದಿನವಾಗಿದ್ದು, ಇದರ ಮಧ್ಯೆ ಖಾಸಗಿ ನೌಕರರೂ ಸಹ ಯಶಸ್ವಿನಿ ಯೋಜನೆಗೆ ಸೇರ್ಪಡೆಗೊಳ್ಳಲು ಈಗ ಅವಕಾಶ ಕಲ್ಪಿಸಿಕೊಡಲಾಗಿದೆ.
ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ಖಾಸಗಿ ನೌಕರರ ಮಾಸಿಕ ವೇತನ 30,000 ಅಥವಾ ವಾರ್ಷಿಕ 3.60 ಲಕ್ಷ ರೂಪಾಯಿಗಳಿದ್ದರೆ ಅಂಥವರು ಯಶಸ್ವಿನಿ ಯೋಜನೆಗೆ ಸೇರ್ಪಡೆಗೊಳ್ಳಬಹುದಾಗಿದೆ. ಈ ಹಿಂದೆ ಸರ್ಕಾರಿ ಹಾಗೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರನ್ನು ಯಶಸ್ವಿನಿ ಯೋಜನೆಯಿಂದ ಹೊರಗಿಡಲಾಗಿತ್ತು.
ಯಶಸ್ವಿನಿ ಯೋಜನೆಗೆ ಸದಸ್ಯತ್ವ ನೋಂದಣಿಯಲ್ಲಿ ಹತ್ತು ಜನರಿಗೆ ಅವಕಾಶವಿದ್ದು, ಹೆಚ್ಚುವರಿ ಜನರ ಸೇರ್ಪಡೆಗೆ ನಮೂನೆ ಲಗತ್ತಿಸಿ ಮಾಹಿತಿ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. ಅಲ್ಲದೆ ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಿರುವವರಿಗೆ ಯಶಸ್ವಿನಿ ಕಾರ್ಡ್ ಪಡೆಯಲು ಅವಕಾಶವಿದ್ದರೂ ಸಹ ಯಾವುದಾದರೂ ಒಂದು ಯೋಜನೆಯಲ್ಲಿ ಮಾತ್ರ ಚಿಕಿತ್ಸೆ ಪಡೆಯಬಹುದಾಗಿದೆ.