ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟ ಪುನಾರಚನೆಯಾಗುತ್ತಿದ್ದು, ರಾಜ್ಯದ ನಾಲ್ವರು ಸಂಸದರಿಗೆ ಕೇಂದ್ರ ಕ್ಯಾಬಿನೆಟ್ ನಲ್ಲಿ ಸ್ಥಾನ ನೀಡಲಾಗುತ್ತಿದೆ.
ಈಗಾಗಲೇ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಎ. ನಾರಾಯಣಸ್ವಾಮಿ ಕೇಂದ್ರ ಸಂಪುಟ ಸೇರ್ಪಡೆಯಾಗುವುದು ಖಚಿತವಾಗಿದೆ. ಈ ನಡುವೆ ಬೀದರ್ ಲೋಕಸಭಾ ಕ್ಷೇತ್ರ ಸಂಸದ ಭಗವಂತ ಖೂಬಾ ಅವರಿಗೂ ದೆಹಲಿಗೆ ಬರುವಂತೆ ಬುಲಾವ್ ಬಂದಿದ್ದು, ಖೂಬಾ ಅವರು ಮೋದಿ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ.
BIG NEWS: ಪ್ರಧಾನಿ ಮೋದಿ ಸಂಪುಟಕ್ಕೆ 43 ಸಂಸದರ ಎಂಟ್ರಿ; 13 ವಕೀಲರು, 6 ವೈದ್ಯರು, 5 ಎಂಜಿನಿಯರ್ಸ್ ಗೆ ಸ್ಥಾನ
ಇದೇ ವೇಳೆ ಸಂಸದ ರಾಜೀವ್ ಚಂದ್ರಶೇಖರ್ ಹೆಸರು ಕೂಡ ಕೇಳಿಬರುತ್ತಿದ್ದು, ರಾಜೀವ್ ಅವರಿಗೂ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.