ಕೊಪ್ಪಳ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ನಡುವೆ ಏನೋ ಇದೆ. ಯಡಿಯೂರಪ್ಪನವರನ್ನು ಕಿತ್ತಾಕಿ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ನಾಯಕರ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದರು. ಬೊಮ್ಮಾಯಿ ಅವರು ಆರ್.ಎಸ್.ಎಸ್ ಹೇಳಿದಂತೆ ಕೇಳಬೇಕು. ಆರ್.ಎಸ್.ಎಸ್ ನವರು ಕೂತ್ಕೋ ಎಂದರೆ ಕೂತ್ಕೋಬೇಕು, ನಿಂತ್ಕೋ ಎಂದರೆ ನಿಲ್ಲಬೇಕು ಎಂದು ಟೀಕಿಸಿದ್ದಾರೆ.
ಮೋದಿಯವರು ಹೆಡ್ ಮಾಸ್ಟರ್, ಶಾ ಅಸಿಸ್ಟೆಂಟ್ ಹೆಡ್ ಮಾಸ್ಟರ್. ಬಿಜೆಪಿ ಸಂಸದರು ರಣಹೆಡಿಗಳು. ಇಂತಹ ರಣಹೇಡಿಗಳ ಸರ್ಕಾರ ನಿಮಗೆ ಬೇಕಾ? ಎಂದು ಪ್ರಶ್ನಿಸಿದ್ದಾರೆ.