ವಿಶ್ವದ ಅತಿ ಸಿರಿವಂತ ವ್ಯಕ್ತಿ ಎಲೋನ್ ಮಸ್ಕ್ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಖರೀದಿಗೆ ಮುಂದಾಗಿದ್ದು, ಇದಕ್ಕೆ ಈಗಾಗಲೇ ಪೂರಕ ಸಿದ್ಧತೆಗಳು ಆರಂಭವಾಗಿವೆ.
ಆದರೆ ಖರೀದಿ ಪ್ರಕ್ರಿಯೆಗೂ ಮುನ್ನ ಟ್ವಿಟ್ಟರ್ ಸಂಸ್ಥೆ ಕೆಲವೊಂದು ಕಾರ್ಯಗಳನ್ನು ಮಾಡಬೇಕೆಂದು ಎಲೋನ್ ಮಸ್ಕ್ ಷರತ್ತು ಇಟ್ಟಿದ್ದು ಒಂದು ವೇಳೆ ಈ ಕಾರ್ಯವಾಗದಿದ್ದರೆ ಈ ಡೀಲ್ ನಿಂದಲೇ ಹಿಂದೆ ಸರಿಯುವುದಾಗಿ ಹೇಳಿದ್ದರು.
ಇದರ ಮಧ್ಯೆ ಎಲೋನ್ ಮಸ್ಕ್, ಟ್ವಿಟ್ಟರ್ ಉದ್ಯೋಗಿಗಳೊಂದಿಗೆ ವರ್ಚುವಲ್ ಮೀಟಿಂಗ್ ನಡೆಸಿದ್ದು, ಮೊದಲ ಮೀಟಿಂಗ್ ನಲ್ಲಿಯೇ ಉದ್ಯೋಗಿಗಳಿಗೆ ಶಾಕ್ ನೀಡಿದ್ದಾರೆ.
ಟ್ವಿಟರ್ ಸಂಸ್ಥೆಯಲ್ಲಿ ಉದ್ಯೋಗ ಕಡಿತದ ಸೂಚನೆಯನ್ನು ಎಲೋನ್ ಮಸ್ಕ್ ನೀಡಿದ್ದು, ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.