ಬೆಂಗಳೂರು: ಕಾಂಗ್ರೆಸ್ ರಾಜಭವನ ಚಲೋ ಪ್ರತಿಭಟನೆ ಬಗ್ಗೆ ಕಿಡಿ ಕಾರಿರುವ ಸಚಿವ ಡಾ. ಸುಧಾಕರ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದು, ಮೊದಲು ಆರೋಗ್ಯ ಸಚಿವರ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವಾದಕ್ಕೆ ಕಾರಣವಾಯ್ತು ಸಿಖ್ ಸಮುದಾಯದ ಕುರಿತ ಕಿರಣ್ ಬೇಡಿಯವರ ’12 ಗಂಟೆ’ ಜೋಕ್
ಎಲ್ಲಾ ಸುಳ್ಳು ಕೇಸ್ ದಾಖಲಿಸಿ ನಮ್ಮನ್ನು ಹೆದರಿಸುವ, ಪ್ರತಿಭಟನೆ ಹತ್ತಿಕುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರ ಯಾವ ಬೆದರಿಕೆಗೂ ಹೆದರಲ್ಲ. ನಮ್ಮನ್ನು ಜೈಲಿಗೆ ಹಾಕ್ತೀರಾ ಹಾಕಿ, ತೊಂದ್ರೆ ಕೊಡ್ತಿರಾ ಕೊಡಿ ಇದ್ಯಾವುದಕ್ಕೂ ಬಗ್ಗುವ ಪ್ರಶ್ನೆಯೇ ಇಲ್ಲ ಎಂದರು.
ಬಿಜೆಪಿ ನಾಯಕರ ಕಾರ್ಯಕ್ರಮಗಳ ಮೇಲೆ ಯಾಕೆ ಕೇಸ್ ಹಾಕಿಲ್ಲ ? ಕೆ.ಎಸ್. ಈಶ್ವರಪ್ಪ ವಿರುದ್ಧ ಯಾಕೆ ಕೇಸ್ ಹಾಕಿಲ್ಲ ? ನಮ್ಮ ಮನೆಗಳ ಮುಂದೆ ಬಿಜೆಪಿ ನಾಯಕರು ಚಡ್ಡಿ ತಂದು ಪ್ರತಿಭಟನೆ ನಡೆಸಿದರು. ಆಗ ಯಾಕೆ ಕೇಸ್ ಹಾಕಿಲ್ಲ ? ಬಿಜೆಪಿ ನಾಯಕರು ನಡೆಸುವ ಪ್ರತಿಭಟನೆಗೆ ಕೋವಿಡ್ ನಿಯಮ ಉಲ್ಲಂಘನೆ ಆಗಲ್ವಾ ? ಕಾಂಗ್ರೆಸ್ ನಾಯಕರು ಮಾತ್ರ ನಿಮಗೆ ಕಾಣ್ತಾರಾ? ಎಂದು ವಾಗ್ದಾಳಿ ನಡೆಸಿದರು.