
ಮೈಸೂರು: ಒಂದೆಡೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಅಬ್ಬರ ಜೋರಾಗಿದ್ದಾರೆ, ಇನ್ನೊಂದೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಚುರುಕುಗೊಂಡಿದೆ. ಮೈಸೂರಿನ ಸಿಹಿ ತಿಂಡಿ ಮಳಿಗೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮೈಸೂರಿನ ಡಿ. ದೇವರಾಜ ಅರಸು ರಸ್ತೆಯಲ್ಲಿರುವ ಬಾಂಬೆ ಟಿಫನೀಸ್ ಹೋಟೆಲ್ ಹಾಗೂ ಸಿಹಿತಿಂಡಿ ಮಳಿಗೆಯ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.