ಭಾರತದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮೈಸೂರು ವಿವಿ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಜಾಗತಿಕ ಮಟ್ಟದ ವಿಶ್ವವಿದ್ಯಾಲಯ ರಾಂಕಿಂಗ್ ಪಟ್ಟಿಯಲ್ಲಿ ಮೈಸೂರು ವಿವಿ 110ನೇ ಸ್ಥಾನ ಪಡೆದಿದೆ.
ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊಫೆಸರ್ ಹೆಚ್. ರಾಜಶೇಖರ್ ಪತ್ರಿಕಾ ಪ್ರಕಟಣೆಯ ಮೂಲಕ ಈ ವಿಷಯ ತಿಳಿಸಿದ್ದು, ವಿಶ್ವವಿದ್ಯಾಲಯಗಳ ಗುಣಮಟ್ಟವನ್ನು ಶ್ರೇಣಿಕರಿಸುವ ಸ್ವತಂತ್ರ ಸಂಸ್ಥೆ ಕ್ವಕ್ ಕ್ವಾರೆಲಿ ಸೈಮನ್ಸ್ ಈ ವಿಚಾರವನ್ನು ಪ್ರಕಟಿಸಿದೆ.
ಆರು ಪ್ರಮುಖ ಅಂಶಗಳನ್ನು ಆಧರಿಸಿ ಈ ಸಂಸ್ಥೆ ಪ್ರತಿ ವರ್ಷ ಜಾಗತಿಕವಾಗಿ ರ್ಯಾಂಕಿಂಗ್ ನೀಡುತ್ತಿದ್ದು, ಮಹತ್ವದ ಸಾಧನೆ ಮಾಡಿರುವ ಕಾರಣಕ್ಕೆ ಮೈಸೂರು ವಿಶ್ವವಿದ್ಯಾಲಯ ಈ ಕೀರ್ತಿಗೆ ಭಾಜನವಾಗಿದೆ.