ದಾವಣಗೆರೆ: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಬಿಜೆಪಿ ನಾಯಕರ ಸಾಲು ಸಾಲು ಬೇಜವಾಬ್ದಾರಿ ಹೇಳಿಕೆಗಳು ಮುಂದುವರೆದಿವೆ. ಇದೀಗ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್ ಮೈಸೂರಿನಲ್ಲಿ ಘಟನೆ ಆದ್ರೆ ನನಗೇನು ಗೊತ್ತು ? ನಾನೇನು ನೋಡಿದ್ದೀನಾ ? ಮಾಡಿದ್ದೀನಾ ? ಎಂದು ಪ್ರಶ್ನಿಸಿದ್ದಾರೆ.
ಇಡೀ ದೇಶವನ್ನೇ ಬೆಚ್ಚಿ ಬೇಳಿಸಿರುವ ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಂಸದ ಸಿದ್ದೇಶ್ವರ್, ಈ ವಿಚಾರವೇ ನನಗೆ ಗೊತ್ತಿಲ್ಲ. ನಾನು ಬೆಳಿಗ್ಗೆ ಮನೆಯಿಂದ ಹೋದರೆ ವಾಪಸ್ ಬರುವುದು ರಾತ್ರಿ 11 ಗಂಟೆಯಾಗುತ್ತದೆ. ಹೀಗಿರುವಾಗ ಮೈಸೂರಿನಲ್ಲಿ ರೇಪ್ ನಡೆದಿದ್ದರೆ ನನ್ನನ್ನು ಕೇಳಿದರೆ ನನಗೆ ಹೇಗೆ ಗೊತ್ತು ? ನಾನೇನು ಹೇಳಲು ಸಾಧ್ಯ ? ನಾನು ನೋಡಿದ್ದೇನಾ ? ಮಾಡಿದ್ದೇನಾ ? ಎಂದು ಪ್ರಶ್ನಿಸಿದ್ದಾರೆ.
ಇದೇನು ಎಲೆಯೋ ಕೀಟವೋ…? ಕಾಡುತ್ತೆ ಹೀಗೊಂದು ಪ್ರಶ್ನೆ
ದಾವಣಗೆರೆಯಲ್ಲಿ ಏನಾದರು ಘಟನೆ ನಡೆದಿದ್ದರೆ ನಾನು ಈ ಬಗ್ಗೆ ಪ್ರತಿಕ್ರಿಯಿಸುತ್ತಿದ್ದೆ. ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸುತ್ತಿದ್ದೆ. ಆದರೆ ಮೈಸೂರಿನಲ್ಲಿ ನಡೆದ ಘಟನೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.