ಮೇಲುಕೋಟೆ: ಲಘುವಾಗಿ ಮಾತನಾಡುವುದು ಸಂಸದೆ ಸುಮಲತಾ ಅವರಿಗೆ ಶೋಭೆತರಲ್ಲ, ಚಲುವನಾರಾಯಣನ ಸನ್ನಿದಿಯಲ್ಲಿ ನಿಂತು ಮಾತನಾಡುತ್ತಿದ್ದೇನೆ. ಮೂಡಾ ಸೈಟ್ ಹಗರಣದಲ್ಲಿ ನನ್ನ ಪಾತ್ರವಿಲ್ಲ. ಅವರ ಬಳಿ ದಾಖಲೆ ಇದ್ದರೆ ತಂದು ದಿನಾಂಕ ನಿಗದಿ ಮಾಡಲಿ. ನಾನು ದಾಖಲೆ ಸಮೇತ ಬರುತ್ತೇನೆ ಎಂದು ಜೆಡಿಎಸ್ ಶಾಸಕ ಪುಟ್ಟರಾಜು ತಿಳಿಸಿದ್ದಾರೆ.
ಮೇಲುಕೋಟೆಯಲ್ಲಿ ಮಾತನಾಡಿದ ಶಾಸಕ ಪುಟರಾಜು, ನಾನು ಚರ್ಚೆಗೆ ಸಿದ್ಧ. ಸಂಸದೆ ಸುಮಲತಾ ಅದೇನು ದಾಖಲೆಗಳನ್ನು ತಂದು ತೋರಿಸುತ್ತಾರೆ ತೋರಿಸಲಿ. ನಾನು ದಾಖಲೆ ಸಮೇತ ಬರುತ್ತೇನೆ. ದಿನಾಂಕ, ಸ್ಥಳ ನಿಗದಿ ಮಾಡಲಿ ಎಂದು ಹೇಳಿದರು.
ನಾನು ದುಡಿದ ದುಡ್ಡಿನಿಂದ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ರಾಜಕೀಯದಲ್ಲಿ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಸುಮಲತಾ ಅವರು ನಟ ಅಂಬರೀಶ್ ಹೆಂಡ್ತಿ ಎಂದು ಆಯ್ಕೆಯಾಗಿದ್ದಾರೆ ಹೊರತು ಅವರ ವೈಯಕ್ತಿಕ ವರ್ಚಸ್ಸಿಂದ ಸಂಸದರಾಗಿ ಗೆದ್ದಿಲ್ಲ. ಮೂರುವರೆ ವರ್ಷದಿಂದ ಏನು ಮಾಡಿದ್ದರೆ ತೋರಿಸಲಿ. ಬರಿ ಸಂಸತ್ ಗೆ ಹೋಗಿ ಕುಳಿತರೆ ಸಾಕಾ ? ಜನರ ಕೆಲಸ ಯಾರು ಮಾಡ್ತಾರೆ ? ಬರಿ ಗಾಳಿಯಲ್ಲಿ ಗುಂಡು ಹೊಡೆಯುವುದಲ್ಲ ಹೊಡೆದರೆ ಎದೆಗೆ ಗುಂಡು ಹೊಡೆಯಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.