ಬೆಂಗಳೂರು: ನಾಳೆ ಅಕ್ಷಯ ತೃತೀಯ ಇದರ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಧರ್ಮ ಸಂಘರ್ಷ ಆರಂಭವಾಗಲಿದೆಯೇ ಎಂಬ ಆತಂಕ ಎದುರಾಗಿದೆ. ಹಿಜಾಬ್, ಹಲಾಲ್ ಬ್ಯಾನ್ ನಡುವೆಯೇ ಇದೀಗ ಅಕ್ಷಯ ತೃತೀಯಕ್ಕೆ ಮುಸ್ಲಿಂ ವ್ಯಾಪಾರಿಗಳ ಅಂಗಡಿಯಲ್ಲಿ ಬಂಗಾರ ಖರೀದಿಸದಂತೆ ಅಭಿಯಾನ ಆರಂಭವಾಗಿದೆ.
ಹಿಂದೂ ಪರ ಸಂಘಟನೆಗಳು ಅಕ್ಷಯ ತೃತೀಯದಂದು ಮುಸ್ಲಿಂ ಮಾಲೀಕರ ಜ್ಯುವೆಲ್ಲರಿ ಅಂಗಡಿಗಳಲ್ಲಿ ಚಿನ್ನ ಖರೀದಿಸದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದು, ಇದಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೂಡ ಬೆಂಬಲ ನೀಡಿದ್ದಾರೆ.
ಅಕ್ಷಯ ತೃತೀಯದಂತಹ ಪವಿತ್ರ ದಿನದಂದು ಹಿಂದೂಗಳು ಹಿಂದೂ ಒಡೆತನದ ಅಂಗಡಿಯಲ್ಲಿಯೇ ಚಿನ್ನ ಖರಿದಿ ಮಾಡಬೇಕು. ಈ ಬಗ್ಗೆ ಸ್ವತ: ಜಾಗೃತರಾಗಿ ಚಿನ್ನ ಖರೀದಿಗೆ ಮುಂದಾಗಿ ಹೊರತು ಯಾವುದೇ ಕಾರಣಕ್ಕೂ ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳಲ್ಲಿ ಬಂಗಾರ ಖರೀದಿ ಮಾಡದಂತೆ ಮನವಿ ಮಾಡಿದ್ದಾರೆ.
ಹಿಂದೂಪರ ಸಂಘಟನೆಗಳ ಹೊಸದೊಂದು ಅಭಿಯಾನ ಇದೀಗ ಮುಸ್ಲಿಂ ಚಿನ್ನದಂಗಡಿ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದ್ದು, ಆತಂಕ ಎದುರಾಗಿದೆ.