ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದಲ್ಲಿ ಜಾಮೀನು ಸಲ್ಲಿಸಿದ್ದು, ಒಂದೊಮ್ಮೆ ಜಾಮೀನು ತಿರಸ್ಕೃತಗೊಂಡರೆ ಬಂಧನದ ಭೀತಿ ಎದುರಾಗಲಿದೆ.
ಶ್ರೀಗಳ ವಿರುದ್ಧ ಪೋಸ್ಕೋ ಸೇರಿದಂತೆ ಗಂಭೀರ ಪ್ರಕರಣಗಳು ದಾಖಲಾಗಿದ್ದು, ಇಂದು ನಿರೀಕ್ಷಣಾ ಜಾಮೀನಿನ ಅರ್ಜಿ ವಿಚಾರಣೆ ನಡೆಯಲಿದೆ. ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡರೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಸಿಗಲಿದೆ.
ಆದರೆ ಪೊಲೀಸರು ಬಂಧಿಸುವ ಭೀತಿಯೂ ಎದುರಾಗಿದ್ದು, ಇದರ ಮಧ್ಯೆ ಮುರುಘಾ ಮಠದ ಬಳಿ ಬಂದೋಬಸ್ತ್ ಹೆಚ್ಚಿಸಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಶ್ರೀಗಳ ಪಾಲಿಗೆ ಇಂದು ನಿರ್ಣಾಯಕ ದಿನವಾಗಿದ್ದು, ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತಂತೆ ಯಾವ ತೀರ್ಪು ಬರಬಹುದು ಎಂಬ ಕಾತರ ಎಲ್ಲರಲ್ಲೂ ಮನೆ ಮಾಡಿದೆ.