ಚಿತ್ರದುರ್ಗ: ಮುರುಘಾಶ್ರೀಗಳು ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿರುವ ಬೆನ್ನಲ್ಲೇ ಪೀಠತ್ಯಾಗಕ್ಕೆ ಒತ್ತಡಗಳು ಹೆಚ್ಚಿದ್ದವು. ಆದರೂ ಮುರುಘಾಶ್ರೀಗಳು ಪೀಠತ್ಯಾಗ ಮಾಡದೇ ಇರುವ ಹಿನ್ನೆಲೆಯಲ್ಲಿ ಇದೀಗ ಸಮುದಾಯದ ಮುಖಂಡರೇ ಶ್ರೀಗಳನ್ನು ವಜಾ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಬುಟ್ಟಿಯಲ್ಲಿನ ಹಣ್ಣು ಕೆಟ್ಟರೆ ಆ ಹಣ್ಣನ್ನು ತೆಗೆದು ಬಿಸಾಕಬೇಕು ಎಂದು ಹೆಳುವ ಮೂಲಕ ಮುರುಘಾಶ್ರೀಗಳನ್ನು ವಜಾಗೊಳಿಸುವ ನಿರ್ಣಯದ ಬಗ್ಗೆ ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ ಅಣಬೇರು ರಾಜಣ್ಣ ಸುಳಿವು ನೀಡಿದ್ದಾರೆ.
ಚಿತ್ರದುರ್ಗದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅಣಬೇರು ರಾಜಣ್ಣ, ವೀರಶೈವ ಮಹಾಸಭಾ ಅಧಿವೇಶನದಲ್ಲಿಯೂ ಮುರುಘಾಮಠದ ಬಿಕ್ಕಟ್ಟಿನ ಬಗ್ಗೆ ಚರ್ಚಿಸುತ್ತೇವೆ. ಮುರುಘಾಶ್ರೀಗಳ ವಿರುದ್ಧ ಗಂಭೀರ ಆರೋಪವಿದೆ. ಆದಾಗ್ಯೂ ಪೀಠತ್ಯಾಗಕ್ಕೆ ಮುಂದಾಗಿಲ್ಲ. ಈ ನಿಟ್ಟಿನಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.