ಚಿತ್ರದುರ್ಗ: ಮುರುಘಾಶ್ರೀ ಡಾ.ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಶ್ರೀಗಳ ವಿರುದ್ಧ ಲುಕ್ ಔಟ್ ನೋಟೀಸ್ ಜಾರಿಗೊಳಿಸಲಾಗಿದೆ.
ಪ್ರಮುಖ ಆರೋಪಿಯಾಗಿರುವ ಮುರುಘಾ ಶರಣರು ಎಲ್ಲಿಯೂ ಪ್ರಯಾಣಿಸದಂತೆ ನಿಗಾ ವಹಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗೂ ಪೊಲೀಸ್ ಇಲಾಖೆಯಿಂದ ಲುಕ್ ಔಟ್ ಸರ್ಕುಲರ್ ಜಾರಿಗೊಳಿಸಲಾಗಿದೆ.
ಆರೋಪಿ ಹೊರ ರಾಜ್ಯ, ವಿದೇಶಗಳಿಗೆ ಪ್ರಯಾಣ ನಡೆಸದಂತೆ ನಿಗಾ ವಹಿಸುವಂತೆ ನೋಟೀಸ್ ನಲ್ಲಿ ಸೂಚಿಸಲಾಗಿದೆ.