ಬೆಂಗಳೂರು: ಚಿತ್ರದುರ್ಗದ ಮುರುಘಾಮಠದ ಬಗ್ಗೆ ಸಾರ್ವಜನಿಕರಿಗೂ ಗೊತ್ತಾಗಬೇಕು. ಮುರುಘಾಮಠದ ಆಡಳಿತಾಧಿಕಾರಿ ಮಠವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಮಕ್ಕಳ ಮೇಲಿನ ದೌರ್ಜನ್ಯ, ಮಠದ ಆಸ್ತಿ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಈ ನಿಟ್ಟಿನಲ್ಲಿ ಹೈಕೋರ್ಟ್ ನ್ಯಾಯಾಧೀಶರಿಗೆ ಪತ್ರ ಬರೆಯುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಮುರುಘಾಶ್ರೀ ಗದ್ದುಗೆಯಿಂದ ಕೆಳಗಿಳಿಯಬೇಕು. ಚಿತ್ರದುರ್ಗದ ಮಠದ ಆಡಳಿತಾಧಿಕಾರಿ ಮಠವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. 10 ಸಾವಿರ ಕಾಫಿ ಎಸ್ಟೇಟ್ ಇತ್ತು. ಈಗ 500 ಎಕರೆಗೆ ಇಳಿದಿದೆ. ಮಠದಲ್ಲಿನ ಹೆಲಿಕಾಪ್ಟರ್ ಯಾರದ್ದು? ಮಠದ ಮೇಲೆ ಇಂತಹ ಆರೋಪಗಳು ಕೇಳಿಬರಲು ಕಾರಣವೇನು ಎಂದು ತನಿಖೆಯಾಗಲಿ ಎಂದು ಒತ್ತಾಯಿಸಿದರು.
ಮುರುಘಾಮಠ ಪ್ರಗತಿಪರರ ಹಾಗೂ ನಕ್ಸಲರ ಅಡ್ಡೆಯಾಗಿದೆ. ಜಾತ್ಯಾತೀತರು, ಪ್ರಗತಿಪರರಿಗೆ ಪ್ರಶಸ್ತಿ ಕೊಡಲಾಗಿದೆ. ಪಾಕಿಸ್ತಾನದ ಮಲಾಲಗೆ ಬಸವ ಪ್ರಶಸ್ತಿ ಕೊಟ್ಟಿದ್ದಾರೆ. ಲಿಂಗಾಯಿತ ಮಠ ಎಂದರೆ ಶಿಕ್ಷಣ ಕೊಡುವುದೊಂದೇ ಉದ್ದೇಶ ಆಗಬೇಕು. ಸಿದ್ದಗಂಗಾ ಮಠ ಇದ್ದಂತೆ ಇರಬೇಕು ಎಂದು ಹೇಳಿದರು.