ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗಳು ಜೈಲು ಸೇರಿರುವ ಘಟನೆ ಬೆನ್ನಲ್ಲೇ ಮುರುಘಾ ಮಠದ ಹಾಸ್ಟೆಲ್ ನಲ್ಲಿದ್ದ 22 ಮಕ್ಕಳು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಚಿತ್ರದುರ್ಗದ ಮುರುಘಾ ಮಠದ ಹಾಸ್ಟೆಲ್ ನಲ್ಲಿದ್ದ 22 ಅನಾಥ ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. 22 ಮಕ್ಕಳಲ್ಲಿ 14 ಹೆಣ್ಣು ಮಕ್ಕಳು ಹಾಗು 8 ಗಂಡು ಮಕ್ಕಳಾಗಿದ್ದಾರೆ.
22 ಅನಾಥ ಮಕ್ಕಳು ಮಠಕ್ಕೆ ಸಿಕ್ಕಿದ್ದಾದರೂ ಹೇಗೆ ? ಅನಾಥ ಮಕ್ಕಳನ್ನು ಸಾಕಲು ಮಠ ಸರ್ಕಾರದಿಂದ ಅನುಮತಿ ಪಡೆದುಕೊಂಡಿತ್ತೇ ? ಮಠದ ಹಾಸ್ಟೆಲ್ ನಲ್ಲಿದ್ದ 22 ಮಕ್ಕಳು ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆ ಮಕ್ಕಳ ಕಥೆ ಏನಾಯಿತು ಎಂಬುದೇ ಈಗಿರುವ ಪ್ರಶ್ನೆ.
ಮಕ್ಕಳ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಚಿತ್ರದುರ್ಗದ ಆರ್ ಟಿ ಐ ಕಾರ್ಯಕರ್ತ ಬಿ.ಹೆಚ್. ಗೌಡ್ರು ಒತ್ತಾಯಿಸಿದ್ದು, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಅಧಿಕಾರಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.