ಧಾರವಾಡ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ಗರಿಗೆದರಿರುವ ಬೆನ್ನಲ್ಲೇ ಶಾಸಕ ಅರವಿಂದ್ ಬೆಲ್ಲದ್ ದೆಹಲಿಗೆ ಪ್ರಯಾಣಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಅರವಿಂದ್ ಬೆಲ್ಲದ್ ಮುಂದಿನ ಸಿಎಂ ಎಂಬ ಪೋಸ್ಟ್ ಗಳು ರಾರಾಜಿಸುತ್ತಿವೆ.
ಬೆಲ್ಲದ್ ಬೆಂಬಲಿಗರು ಶಾಸಕ ಅರವಿಂದ್ ಬೆಲ್ಲದ್ ಅವರ ಫೋಟೋಹಾಕಿ ಮುಂದಿನ ಸಿಎಂ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ಸಂಭ್ರಮಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಂದಿ ಫೇಸ್ ಬುಕ್ ಖಾತೆಯಲ್ಲಿ ಇಂತಹ ಪೋಸ್ಟ್ ಹಾಕಲಾಗಿದ್ದು, ಉತ್ತರ ಕರ್ನಾಟಕದ ವೀರಶೈವ ಲಿಂಗಾಯತ ಸಿಎಂ ಎಂದು ಬರೆದಿದ್ದಾರೆ.