ತುಮಕೂರು: ಮಳೆ ಅಬ್ಬರದ ನಡುವೆಯೇ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ನಾಪತ್ತೆಯಾಗಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ಗ್ರಾಮದಲ್ಲಿ ನಡೆದಿದೆ.
ಆಡುಗೊಂಡನಹಳ್ಳಿ ನಿವಾಸಿಗಳಾದ ಹರೀಶ್ (31), ಯೋಗೀಶ್ (36) ನಾಪತ್ತೆಯಾದವರು. ಕೆರೆಯಲ್ಲಿ ನೀರು ಹಿಡಿಯುವಾಗ ಕೆರೆಯಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ.
ಗುಬ್ಬಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಕೆರೆಯ ಬಳಿ ಗ್ರಾಮಸ್ಥರು ಜಮಾವಣೆಗೊಂಡಿದ್ದಾರೆ.