ಹುಬ್ಬಳ್ಳಿ: ಉಪ ನೋಂದಣಾಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ಮಾಜಿ ಸಚಿವ ಜಗದೀಶ್ ಶೆಟ್ಟರ್, ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಉತ್ತರ ವಲಯದ ಉಪ ನೋದಣಾಧಿಕಾರಿಗಳಾದ ಸೌಮ್ಯಲತಾ ಹಾಗೂ ಪ್ರತಿಭಾ ಬೀಡಿಕರ ಅವರ ಭ್ರಷ್ಟಾಚಾರ ಹೆಚ್ಚಿದೆ. ನೋಂದಣಿ ಕಾರ್ಯಕ್ಕೆ ಬರುವವರನ್ನು ವಾರಗಟ್ಟಲೆ ಓಡಾಡಿಸುತ್ತಿದ್ದಾರೆ. ಅಲ್ಲದೇ ಏಜೆಂಟರ ಮೂಲಕ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇಬ್ಬರು ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಂಡು ತುರ್ತಾಗಿ ವರ್ಗಾಯಿಸಿ ಎಂದು ಪತ್ರದಲ್ಲಿ ಬರೆದಿದ್ದಾರೆ.
ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದಂತೆ ಎಚ್ಚೆತ್ತ ಸರ್ಕಾರ; ತಪಾಸಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ
ಇಬ್ಬರು ಉಪ ನೋಂದಣಾಧಿಕಾರಿಗಳ ವಿರುದ್ಧ ಜನರು ಮಾತ್ರವಲ್ಲ ಕ್ರೈಡ್ ಸಂಸ್ಥೆ, ಬಾಂಡ್ ರೈಟರ್, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಾರ್ವಜನಿಕರ ಗ್ರಾಹಕರ ವೇದಿಕೆ ಸದಸ್ಯರು ಸೇರಿದಂತೆ ಹಲವರು ಪ್ರತಿಭಟನೆ ನಡೆಸಿ ದೂರು ನೀಡಿದ್ದಾರೆ. ಉಪ ನೋಂದಣಾಧಿಕಾರಿಗಳನ್ನು ಬೇರೆಡೆ ವರ್ಗಾಯಿಸಿ ಕ್ರಮ ಕೈಗೊಳ್ಳುವಂತೆ ಶೆಟ್ಟರ್ ಮನವಿ ಮಾಡಿದ್ದಾರೆ.