ಭಾರತವು ಈ ವರ್ಷದ ಮಾರ್ಚ್ ವೇಳೆಗೆ 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಕಲು ಪ್ರಾರಂಭಿಸುತ್ತದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಹೆಸರಾಂತ ಸಾರ್ವಜನಿಕ ಆರೋಗ್ಯ ತಜ್ಞ, ಕೇಂದ್ರ ಸರ್ಕಾರದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ, ರೋಗನಿರೋಧಕ ಗುಂಪಿನ (NTAGI) ಅಧ್ಯಕ್ಷ ಎನ್.ಕೆ. ಅರೋರ ಮಕ್ಕಳಿಗೆ ಲಸಿಕೆ ನೀಡುವುದರ ಬಗ್ಗೆ ಈ ಹೇಳಿಕೆ ನೀಡಿದ್ದಾರೆಂದು ವರದಿಯಾಗಿದೆ.
ಭಾರತವು 2021 ಜನವರಿ 16 ರಂದು ಕೋವಿಡ್ ವಿರುದ್ಧದ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿತು. ದೇಶವು ಅಂದಿನಿಂದ ಇಂದಿನವರೆಗು 157 ಕೋಟಿ ಡೋಸ್ ಕೊರೋನಾ ಲಸಿಕೆಗಳನ್ನು ನೀಡಿದೆ.
ಜನವರಿ 3 ರಿಂದ ದೇಶದಲ್ಲಿ 15-18 ವಯೋಮಾನದ ಮಕ್ಕಳಿಗೆ ಲಸಿಕೆ ಹಾಕಲು ಪ್ರಾರಂಭಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 25 ರಂದು ಘೋಷಿಸಿದ್ದರು.
ಮಕ್ಕಳ ಲಸಿಕೆ ಅಭಿಯಾನ ಶುರುವಾದ್ಮೇಲೆ, 15-18 ವಯೋಮಾನದ 3.5 ಕೋಟಿ ಮಕ್ಕಳು ಕೋವಿಡ್ ಲಸಿಕೆಯ ಮೊದಲ ಡೋಸ್ ಅನ್ನು ಸ್ವೀಕರಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಭಾನುವಾರ ಮಾಹಿತಿ ನೀಡಿದ್ದರು.