alex Certify BIG NEWS: ಮಾರಾಟ ಸ್ಥಗಿತದ ಬೆನ್ನಲ್ಲೇ ಅಧಿಕೃತ ವೆಬ್‌ಸೈಟ್‌ನಿಂದ್ಲೂ ಮಾರುತಿ ಸುಜುಕಿ ಎಸ್‌-ಕ್ರಾಸ್‌ಗೆ ಗೇಟ್‌ಪಾಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಾರಾಟ ಸ್ಥಗಿತದ ಬೆನ್ನಲ್ಲೇ ಅಧಿಕೃತ ವೆಬ್‌ಸೈಟ್‌ನಿಂದ್ಲೂ ಮಾರುತಿ ಸುಜುಕಿ ಎಸ್‌-ಕ್ರಾಸ್‌ಗೆ ಗೇಟ್‌ಪಾಸ್‌

ಹೊಸದಾಗಿ ಬಿಡುಗಡೆಯಾದ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ SUVಗೆ ದಾರಿ ಮಾಡಿಕೊಡಲು ಕಂಪನಿ ಭಾರತದಲ್ಲಿ ಎಸ್‌-ಕ್ರಾಸ್ ಕಾರುಗಳಿಗೆ ಫುಲ್‌ ಸ್ಟಾಪ್‌ ಹಾಕಿದೆ. ಮಾರುತಿ ಸುಜುಕಿ ತನ್ನ ಅಧಿಕೃತ ವೆಬ್‌ಸೈಟ್‌ನಿಂದಲೂ ಎಸ್-ಕ್ರಾಸ್ ಅನ್ನು ತೆಗೆದು ಹಾಕಿದೆ.

ಮಾರುತಿ ಸುಜುಕಿ, ಭಾರತದಲ್ಲಿ S-ಕ್ರಾಸ್ ಪ್ರೀಮಿಯಂ ಕ್ರಾಸ್ಒವರ್‌ಗಳ ಸುಮಾರು 1.7 ಲಕ್ಷ ಕಾರುಗಳನ್ನು ಮಾರಾಟ ಮಾಡಿತ್ತು. ಆದ್ರೆ ನಿರೀಕ್ಷಿತ ಮಟ್ಟದಲ್ಲಿ ಎಸ್‌-ಕ್ರಾಸ್‌ ಮಾರಾಟವಾಗಿರಲಿಲ್ಲ. ಎಸ್‌-ಕ್ರಾಸ್‌ ಕಾರಿನ ಸ್ಟೈಲಿಂಗ್‌ ಗ್ರಾಹಕರಿಗೆ ಇಷ್ಟವಾಗಿಲ್ಲ ಅಂತಾ ಹೇಳಲಾಗ್ತಿದೆ.

ಸದ್ಯ ಎಲ್ಲಾ ಕಡೆ SUV ರೀತಿಯಲ್ಲಿರುವ ಕಾರುಗಳನ್ನು ಜನರು ಇಷ್ಟಪಡ್ತಿದ್ದಾರೆ. ಆದ್ರೆ ಮಾರುತಿ ಸುಜುಕಿ S-ಕ್ರಾಸ್ ಬೃಹತ್ ಹ್ಯಾಚ್‌ಬ್ಯಾಕ್‌ನಂತೆ ಕಾಣುತ್ತದೆ. ಅದೇ ಕಾರಣಕ್ಕೆ ಕಾರು ಗ್ರಾಹಕರನ್ನು ಸೆಳೆಯಲು ವಿಫಲವಾಯ್ತು ಅನ್ನೋದು ತಜ್ಞರ ಅಭಿಪ್ರಾಯ. ಮಾರುತಿ ಸುಜುಕಿ ಎಸ್-ಕ್ರಾಸ್ ಪ್ರೀಮಿಯಂ ಕ್ರಾಸ್ಒವರ್ ಅನ್ನು 2015 ರಲ್ಲಿ ಮತ್ತೆ ಪ್ರಾರಂಭಿಸಲಾಯಿತು. ಅದೇ ಸಮಯದಲ್ಲಿ ಹುಂಡೈ ದೇಶದಲ್ಲಿ ಕ್ರೆಟಾ ಎಸ್‌ಯುವಿಯನ್ನು ಬಿಡುಗಡೆ ಮಾಡಿತು.

ಮಾರುತಿ ಸುಜುಕಿ ಎಸ್‌—ಕ್ರಾಸ್‌ ಇಮೇಜ್‌ ಕಾಪಾಡಿಕೊಂಡು ಅನೇಕ ಫೀಚರ್‌ಗಳನ್ನು ನೀಡಿದರೂ ಕ್ರೆಟಾ ಮಾರಾಟವು ಗಗನಕ್ಕೇರಿತು. ಹಲವಾರು ವಿನ್ಯಾಸ ಪರಿಷ್ಕರಣೆಗಳು ಮತ್ತು ನವೀಕರಣದ  ಹೊರತಾಗಿಯೂ ಎಸ್‌—ಕ್ರಾಸ್‌ ಮಾರಾಟ ನಿರೀಕ್ಷಿತ ಮಟ್ಟ ತಲುಪಲೇ ಇಲ್ಲ.  ಹೊಸದಾಗಿ ಬಂದಿರೋ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಎಸ್‌ಯುವಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಮಾರುತಿ ಸುಜುಕಿ ಅಂತಿಮವಾಗಿ ಎಸ್‌-ಕ್ರಾಸ್‌ ಮಾರಾಟವನ್ನೇ ಸ್ಥಗಿತಗೊಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...